ಪ್ರೇಮಕ್ಕ ನವರ ಕವನ ಮೂರು ಸಲ ಓದಿ ಬಿಟ್ಟೆ ಓದುತ್ತ ಇದ್ದರೆ ಮತ್ತೆ ಓದಬೇಕು ಎನಿಸುವಷ್ಟು ಸರಳ ಸುಂದರ ಪದಗಳಿಂದ ಕವನ ಕಟ್ಟಿದ್ದಾರೆ
ಕಟುಕರಾಗದೆ ಕೆಡುಕು ಮಾಡುವವರಿಗೆ ಬುದ್ದಿ ಹೇಳಿ ಅವರು ಕಟುಕರೆಂದು ನೀವು ಕಟುಕರಂತೆ ಅಗಬೇಡಿ
ಕದನ ಬೇಡ ರಕ್ತ ಹರಿಸುವ ಖಡ್ಗವನ್ನು ಬಿಟ್ಟು
ಶಾಂತವಾಗಿರುವ ಲೇಖನಿಯಿಂದಲೇ
ಎಲ್ಲೆಡೆ ಶಾಂತಿಯ ಚೆಲ್ಲುವಂತ ಸಂದೇಶ ನೀಡಿದ್ದಾರೆ
ಹೌದು ಬಾಳು ಬಂಗಾರವಾಗಬೇಕಾದರೆ ಕವಿ ಬರೆಯುವ ಪ್ರತಿ ಪದವು ಬಂಗಾರದಂತಿರಬೇಕು ಹಿತರರು ಬೇಗನೆ ಬದಲಾಗುವಂತೆ ಎಲ್ಲರೂ ಸ್ವತಂತ್ರವಾಗಿ ಬದುಕಲು ಕವನದಲ್ಲಿ ಬಡಿದೆಬ್ಬಿಸಲು ತಿಳಿಸಿದ್ದಾರೆ
ಕಾಲ ಬದಲಾದಂತೆ ಬರಿ ಸುಳ್ಳು ವಂಚನೆಗಳಿಂದ ತುಂಬಿ ಹೋಗಿದೆ ಇದನ್ನು ಬದಲಿಸುವ ಶಕ್ತಿ ಕವನಕ್ಕಿದೇ ಇಂತ ಬರಹದಲ್ಲಿಯೇ ಜೀವನ ಪಾವನವಾಗ ಲೆಂದು ತಿಳಿಸಿದ್ದಾರೆ
ಕವಿ ಬರೆದ ಕವನವು ಹೇಗಿರ ಬೇಕು ಗೊತ್ತೇ ಉದಾಹರಣೆ ಈಗ ಪ್ರೇಮ್ ರವರ ಕವನವೇ ತೆಗೆದು ಕೊಳ್ಳಿ ಇದನ್ನು ಓದಿಯೇ ನನಗನಿಸಿದ್ದು ನಾನು ಒಬ್ಬ ಕವಿಯಾಗಿ ಈ ತರಹ ಕವನಗಳನ್ನು ಕಟ್ಟಿ ಸಮಾಜದಲ್ಲಿನ ಜನ ಅರ್ಥೈಸಿ ಕೊಳ್ಳುವಂತ ಬರಹವು ಬರೆಯಬೇಕೆನಿಸಿತು ನೋಡಿ ಅಕ್ಕಾ ನವರು ಎಷ್ಟು ಲೀಲಾ ಜಾಲವಾಗಿ ಕವಿಗಳಿಗೆ ಎಷ್ಟೆಲ್ಲ ಹೇಳಿದ್ದಾರೆ ಅಲ್ವಾ ಕವಿಗಳು ಬರೆದ ಕವನವು ಓದುಗರ ಮನದಲ್ಲಿ ಶಾಶ್ವತವಾಗಿ ಉಳಿಯುವಂತೆ ಬರೆಯಬೇಕೆಂದು ಕವಯತ್ರಿ ಪ್ರೇಮ್ ರವರು ಅದ್ಬುತ ಕವನ ಮೂಲಕ ತಿಳಿಸಿಕೊಟ್ಟಿದ್ದಾರೆ ನಿಜಕ್ಕೂ ನನಗೆ ತುಂಬಾ ಇಷ್ಟವಾದ ಕವನಗಲ್ಲಿ ಇದು ಒಂದು ತುಂಬಾ ಅರ್ಥಗರ್ಭಿತವಾಗಿವೆ
ಧನ್ಯವಾದಗಳು ಆಕ್ಕ
ತಿಳಿದಷ್ಟು ಹೇಳಿದ್ದೇನೆ ತಪ್ಪುಗಳು ಇದ್ದರೆ ಕ್ಷಮಿಸಿ ತಿದ್ದು ಬಿಡಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ