ಗುರುವಾರ, ಏಪ್ರಿಲ್ 16, 2020

1393. ಮಾನವಗೆ

ಮಾನವಗೆ..

ಬದಿಯ ಜನರ ನೋಡಬೇಡ
ಕದಿಯುವಾಟ ಆಡಬೇಡ
ಲಂಚದಿಂದ ಮಂಚ ಬೇಡ
ಕೊಂಚ ತಾಳ್ಮೆಯಿಂದ ನಡೆಯೊ ಮಾನವ.

ಜಾತಿ-ಗೀತಿ ಕೊಡುವುದೇನು?
ಜ್ಞಾನ ನಿನಗೆ ಬೇಡವೇನು?
ಅಜ್ಞಾನವಳಿದು ಸುಜ್ಞಾನ ಬೆಳೆಸಿ
ವಿಜ್ಞಾನಿಯಾದ್ರೂ ಗುಣವ ಗಳಿಸೊ ಮಾನವ.

ಅಂಧಕಾರದಲ್ಲಿ ಮೆರೆದು
ಬಂಧವೆಲ್ಲ ತಾನೇ ತೊರೆದು
ಸಂಧಿಯಲ್ಲಿ ಇಣುಕದೇನೆ
ಮಾನವತೆಯ ಗಳಿಸಿ ಬದುಕೊ ಮಾನವ.

ತನ್ನತನವನೆಂದೂ ಬಿಡದೆ
ಧನದಾಹಕಾಗಿ ಹಲ್ಲುಬಿಡದೆ
ದುರಾಸೆಯನ್ನು ಶೂನ್ಯ ಮಾಡಿ
ಕದನವನ್ನು ದೂರಕೆಸೆದು ಬಾಳೊ ಮಾನವ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ