ಸೋಮವಾರ, ಏಪ್ರಿಲ್ 6, 2020

1340. ಹೆಣ್ಣೆಂದರೆ

ಹೆಣ್ಣೆಂದರೆ..

 ಪ್ರೀತಿಯಲಿ ಬ್ರಹ್ಮಾಂಡ, ತಾಳ್ಮೆಯಲಿ ಆಕಾಶ
ಮನೆ ಸದಸ್ಯರ ಹಸಿವಾರಿಕೆಗೆ ನೀಡುತ್ತ ಅವಕಾಶ
ತಾನೆ ಉಪವಾಸವಿದ್ದರು ಹೇಳದೆ ಇರುವ ವಿಪರ್ಯಾಸ
ಸರ್ವ ಕಾರ್ಯ  ನಿಭಾಯಿಸುವ ಸತತಾಭ್ಯಾಸ!

ಗರ್ವದಲಿ ಮಹಾಕಾಳಿ, ಸರ್ವರಲಿ ಒಂದಾಗಿ ಬಾಳಿ
ಮಕ್ಕಳನು ಪೊರೆವಾಕೆ, ಗಂಡನನು ತಡೆವಾಕೆ
ಅತ್ತೆ ಮಾವರ ಪೋಷಿಸುವ ಸದ್ -ಗೃಹಿಣಿ ಈಕೆ!
ಮನೆಯ ಸಕಲ ಕಾರ್ಯದಿ ಪರರ ಮಾತೇಕೆ?

ಪುಟ್ಟ ಪುಟ್ಟ ಆಸೆಗಳ ಅರಗಿಣಿ ಹೆಣ್ಣಿವಳು
ಸೀರೆ, ಒಡವೆ, ಶೃಂಗಾರ ಸಾಧನಕೆ ಮಾರುಹೋಗುವವಳು!
ಪರ ಪುರುಷರ ಒಡ ಹುಟ್ಟಿದವರಂತೆ ಸತ್ಕರಿಸುವವಳು
ಪರ ಸ್ತ್ರೀಯರಂತೆ ತಾ ಮೆರೆಯಬೇಕೆಂದು ಬಯಸುವವಳು!

ಗಂಡನ ಗುಣಾವಗುಣಗಳ ತಿಳಿದು ನಡೆವವಳು
ಮಕ್ಕಳ ಬೇಕು ಬೇಡಗಳ ಪೂರೈಸುವವಳು
ಕುಟುಂಬವೆಂಬ ನೊಗಕೆ ತನ್ನ ಹೆಗಲು ಕೊಟ್ಟವಳು..
ಕುಂಟುತಲಿದ್ದರೂ ತಾನು ಕೆಲಸಕ್ಕಂಜದ ಮನೆಮಗಳು..

ಹುಟ್ಟಿದ ಮನೆ ಬಿಟ್ಟು ಪತಿರಾಯನ ಸೇರಿದವಳು.
ಗಂಡನ ಸಮಕೆ ದುಡಿದು ಸರ್ವರ
ಸಂಬಾಳಿಸುವವಳು!
ಪಶು ಪಕ್ಷಿ ಗಿಡಗಳನೂ ಮನೆಯಲಿ ಬೆಳೆಸುವವಳು.
ಪಶುವಂಥ ಮನುಜರ ಸದೆ ಬಡಿಯುವವಳು..
@ಪ್ರೇಮ್@
29.10.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ