ಸೋಮವಾರ, ಏಪ್ರಿಲ್ 6, 2020

1367. ಗಝಲ್-23

ಗಝಲ್

ಮನುಜಾ ನೀ ನನ್ನೊಳಗಿನ ಗಿಡ ಮರಗಳ ಕಡಿವಾಗ ನಾ ಮೌನ!
ನನ್ನೆದೆಯನು ತೋಡಿ ಗುಂಡಿಗಳ ತೆಗೆವಾಗ ನಾ ಮೌನ!!

ನಿನ್ನ ಮಕ್ಕಳು ನನ್ನ ಮೇಲೆ ಕುಣಿದು ಕುಪ್ಪಳಿಸುವರು,
ಮಿಠಾಯಿ ತಿಂದು ಪ್ಲಾಸ್ಟಿಕ್ ಬಿಸುಟಾಗ ನಾ ಮೌನ!

ಹರಿತವಾದ ಕತ್ತಿಯಿಂದ ಮರವ ಕತ್ತರಿಸುತಲಿರುವೆ,
ಕಾಂಕ್ರೀಟಿನ ಕಾಡು ಎತ್ತರೆತ್ತರಕೆ ಏರುವಾಗ ನಾ ಮೌನ!

ಕೆಂಪು ನೆತ್ತರದು ಹರಿದು ನನ್ನ ಮೇಲೆ ಬೀಳುವುದು,
ಜಾಗ, ನೀರು,ಗಾಳಿಗಾಗಿ ಹೋರಾಡಿ ನೀ ಸಾಯುವಾಗ ನಾ ಮೌನ!

ನಿನ್ನ ಕರಗಳು ಬಳಸುವ ವಸ್ತುಗಳು ನನ್ನ ಮೇಲೆ ಹಲವಾರಿವೆ,
ಕಸವು ಮೇಲೆ ಬಿದ್ದು ಮೂಗಿಗೆ ನಾರುವಾಗ ನಾ ಮೌನ!

ಮಳೆ, ಬೆಳೆ, ನೀರು, ಆಹಾರ, ಗಾಳಿಯಿಲ್ಲದೆ ಪರಿತಪಿಸುವೆ,
ವಲಸೆ ತಿರುಗುತಲಿ,  ನನಗೆ ವಿಷವುಣಿಸಿ ನೀನೂ ಉಣುವಾಗ ನಾ ಮೌನ!

ಪ್ರೇಮದೆನ್ನೆಡೆಗೆ ನೋಡದೆ ಜೀವಗಳ ತುರುವು ಮುರುವಾಗಿರಿಸುವೆ!
ನಿನ್ನ ಬೇಡದ, ಆಗದ ಮಂಕುಬುದ್ಧಿಯ ನೋಡಿದಾಗ ನಾ ಮೌನ!
@ಪ್ರೇಮ್@
18.05.2018

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ