ಸೋಮವಾರ, ಏಪ್ರಿಲ್ 6, 2020

1363. ಅಗೆದಷ್ಟು ಆಳ



ಕವಿತೆ

ಅಗೆದಷ್ಟು ಆಳ...

ಬದುಕ ಆಳ ಬಯಕೆ ಕೋಟಿ
ಅಗೆಯೆ ಅರಿವು, ಕ್ಷಣವು ಪೈಪೋಟಿ!
ಕಲಿಕೆ ಸಹಜ ಸರ್ವ ಕ್ಷಣವೂ
ಮುಗಿಲಿಗೇರೋ ಮನದ ತವಕವೂ..

ಮನ-ಮನೆಯಲಿ ವಿಷದ ಬೀಜ!
ಘಳಿಗೆ ಪ್ರೀತಿ, ಒಡನೆ ದ್ವೇಷದ ಧ್ವಜ!
ಮೂಢ ನಂಬಿಕೆಯ ಬೀಜ ಕಿತ್ತು, ಸತ್ಯ
ನಂಬಿಕೆಯ ನೀರ ಸುರಿಯಬೇಕು ನಿತ್ಯ!!

ಮೋಸ ವಂಚನೆಯ ಸಾಲು ಜಾಡು
ವ್ಯಾಪಾರದಲ್ಲಿ ಬೇಕೆಂದು ಲಾಭ ನೋಡು!
ತಿನ್ನೋ ಅನ್ನ ಬಳಸೋ ವಸ್ತು,
ನಕಲು ಕೊಂಡು ತಾನು ಸುಸ್ತು!

ಆರೋಗ್ಯವ ಕೆಡಿಸಿಕೊಂಡು, 
ಹಣವನೆಲ್ಲ ವ್ಯಯಿಸಿ ನಡೆವ!
ಸಮಯ ನೋಡಿ ದಿನವ ಕಳೆವ
ಮೂರ್ಖ ಮನುಜ ತಾ  ಮೇಲೆಂದು ಮೆರೆವ!!
@ಪ್ರೇಮ್@
24.07.2019

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ