ಬೇಕಾಗಿಲ್ಲ ನೀರುಳ್ಳಿ
ಏಕೆ ಅಳುತಿರುವೆ ಮಗಳೇ
ಅಡಿಗೆ ತಿಳಿಯದೆ ನಿನಗೆ
ಬಳಸದೆಯೇ ನೀರುಳ್ಳಿ?
ನೂರೈವತ್ತಾದರೇನು ಕಿಲೋಗೆ
ನಗುನಗುತಲಿ ಬಡಿಸನ್ನವ
ಬಳಸದೆ ನೀರುಳ್ಳಿ!
ಬೆಳ್ಳುಳ್ಳಿ ನೀರುಳ್ಳಿ ಸೇವನೆಯು
ವರ್ಜ್ಯವು ಊಟದಲಿ
ಪೂಜೆ ಮಾಡುವ ಸಮಯದಲಿ!
ತಿಂದರೂ,ತಿನ್ನದಿದ್ದರೂ
ಬಹಳ ವ್ಯತ್ಯಾಸವಿಲ್ಲ
ನಗುತ ಬೇಯಿಸು ಸಂತಸದಲಿ..
ನಗುವಿರಲು ಹೃದಯದಲಿ
ಸಂತಸವಿರಲು ಮನದಲಿ
ಬಳಸಲೇ ಬೇಕೆಂದಿಲ್ಲ ನೀರುಳ್ಳಿ..
ಅಜ್ಜಿ ಅಜ್ಜರ ಕಾಲದಿಂದ
ತಿಂದು ಬೆಳೆದಿಹರು ನೀರುಳ್ಳಿಯ
ಯೋಚನೆ ಬೇಡವು ನಿನಗೆ
ಬದುಕಬಹುದು ತಿನ್ನದೆ ನೀರುಳ್ಳಿ!!
@ಪ್ರೇಮ್@
05.12.2019
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ