ಮನಸ್ಸೆಂಬ ಮಂದಿರದಲ್ಲಿ
ಮನಸ್ಸೆಂಬ ಮಂದಿರದಿ,
ನೀನೇ ನನ್ನ ದೇವತೆ,,,
ಯಾರಿಗೂ ಕಾಣದ ನನ್ನ
ಆರಾಧ್ಯದೈವ,,,
ಅಲ್ಲಿ ನಿನ್ನ ಪ್ರೀತಿಯ ಅರ್ಚನೆ,
ಶ್ಲೋಕ, ಜಪ-ತಪಗಳೆಲ್ಲ
ನಿರ್ವಿಘ್ನವಾಗಿ ಸಾಗುತಿವೆ,,,
ಯಾರ ಹಾಗೂ ಯಾವ ವಿರೊಧವೂ ಇಲ್ಲದೆ,,,
ಮನಸ್ಸು ಮುಟ್ಟದೆ ಕನಸಲಿ
ಬರಲು ಹೇಗೆ ಸಾಧ್ಯ,,,,,,
ಎಲ್ಲೋ ಇದ್ದ ನೀನು ಇನ್ನೆಲ್ಲೋ
ಇದ್ದ ನಾನು,
ಆತ್ಮಾನುಭಂದವಿರದೆ ಸೇರಲು
ಹೇಗೆ ಸಾಧ್ಯ,,,,,
ಕಾರಣವಿರದೇ ಮನದಲಿ ಪ್ರೀತಿ
ಮೂಡಲು ಹೇಗೆ ಸಾಧ್ಯ,,,,,
ನಿನ್ನಲ್ಲೇ ಒಂದಾದ ಮೇಲೆ,
ಉಸಿರಿರದೆ ಜೀವವಿರಲು,
ಹೇಗೆ ಸಾಧ್ಯ,,,
ಇವಳು ನನ್ನೊಲವಿನ ದೇವತೆ |
ನಾನು ಇವಳಾರಾದಿಸುವ ಭಕ್ತ||
ನನ್ನೆದೆಯ ಮಂದಿರವೇ|
ಇವಳಿಗೆ ಗರ್ಭಗುಡಿ ||
ನನ್ನ ಉಚ್ವಾಸ ನಿಶ್ವಾಸವೇ|
ಇವಳಿಗೆ ಮಂಗಳಾರತಿ||
ನನ್ನ ಸ್ಮ್ರತಿ ಪುಟದಲ್ಲಿ
ಇವಳ ಅಂದ ಚಂದದ
ವರ್ಣನೆಯೇ ಮಂತ್ರ ಘೋಷಗಳು ||
ನನ್ನ ಹೃದಯದ
ಅಪಧಮನಿ, ಅಭಿಧಮನಿಗಳೇ
ಇವಳಿಗೆ ತೀರ್ಥ ಪ್ರಸಾದಗಳು||
ನೀನು ಇರುವಾಗ ಚಿಂತೆ...ಯಾಕೀಗ
ನಿನ್ನಿಂದಲೇ...ತಾನೇ ನಾನೀಗ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ