ಬುಧವಾರ, ಏಪ್ರಿಲ್ 15, 2020

1386. ಮೌನವಾಗಿಹಳು ಭಾರತಿ

ಮೌನವಾಗಿಹಳು ಭಾರತಿ

ಪ್ರಪಂಚವಿಡೀ ಮೌನ! ಭಾರತಿಯೂ ಕೂಡಾ!
ತನ್ನ ಕಂದರೆಲ್ಲರ ಪೊರೆದು ಸಲಹಬೇಕಾಗಿದೆ!
ಹಲ ವಿಧದ ಜೀವ ಜಂತುಗಳ ನಾಶಪಡಿಸಬೇಕಿದೆ,
ತನ್ನ ಜವಾಬ್ದಾರಿಯ ಅರಿವಿದೆ, ಆದರೂ ಮೌನ!!!

ಬಲು ದಿನಗಳಿಂದ ಸುಡುತ್ತಿದ್ದ ಬೇಗೆಯೊಂದಿದೆ,
ಬಳಲಿ ಬೆಂಡಾಗಿ ಬೇಸತ್ತ ಕ್ಷಣಗಳೂ ಇವೆ!!
ಮಾನವನೇಕೆ ಮೆರೆಯುತಿಹನು ಹೀಗೆ ಬೇಕಾಬಿಟ್ಟಿ?
ತುಂಡರಿಸಿ ಪ್ರಾಣಿ ಪಕ್ಷಿ, ಕಡಿದುರುಳಿಸಿ ಗಿಡ ಮರವ?

ತಾನೇಕೆ ಮರೆತಿಹನು ಪಂಚ ಭೂತಗಳ ಮಹಿಮೆಯನು?
ಬುದ್ಧಿವಂತ ಮಾನವನ ಅರಿವಿಗೆ ಬಾರೆದೇ ಎಲ್ಲ?
ಇರಲಿ, ಅನುಭವಿಸಲಿ ಸಂಕಟ, ದು:ಖ, ನೋವು!
ನನ್ನ ಮೌನದ ಬೆಲೆ ತಿಳಿದಾದರೂ ಸರಿಯಾಗಲಿ!!

ಹೌದು, ಭಾರತಿಯಿಂದು ಮೌನಕ್ಕೆ ಶರಣಾಗಿಹಳು!
ಸರ್ವ ನೋವುಗಳ ತನ್ನೊಳಗೆ ತುಂಬಿಕೊಂಡು!!!
ತನ್ನ ಮಕ್ಕಳ ಒಂಟಿತನ, ಬೇಸರವ ಸಹಿಸಿಕೊಂಡು,
ಮೌನದ ಮುಂದೆ ಸುಖವಿರಬಹುದೆಂಬ ನಂಬಿಕೆಯಿಂದ!!!
@ಪ್ರೇಮ್@
11.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ