1. ಬಂತು ನಮಗೆ ಸ್ವಾತಂತ್ರ್ಯ
ನಮ್ಮೆಲ್ಲ ನಾಯಕರು,ಹಿರಿಯರು ಹೋರಾಡಿ,
ಬಂತು ನಮಗೆ ಸ್ವಾತಂತ್ರ್ಯ!!
ಹಿರಿಯರು ಕಿರಿಯರು ಜತೆಗೂಡಿ,
ಬಂತು ನಮಗೆ ಸ್ವಾತಂತ್ರ್ಯ//
ಹಾಳಾದ ಕಟ್ಟಡಗಳ ಕಟ್ಟಲು,
ಲೆಕ್ಕವಿಲ್ಲದಷ್ಟು ವಿದ್ಯಾಲಯಗಳ ತೆರೆಯಲು,
ದಟ್ಟಡವಿಯ ಮರಗಳ ಕಡಿಯಲು,
ಬಂತು ನಮಗೆ ಸ್ವಾತಂತ್ರ್ಯ!
ಜಾತಿ -ಮತಗಳ ನಡುವೆ ಹೋರಾಡಲು,
ರಾಜ್ಯ-ರಾಜ್ಯಗಳ ನಡುವೆ ಕಿತ್ತಾಡಲು,
ಹೆಣ್ಣು ಮಕ್ಕಳ ಮಾನಾಪಹರಣ ಮಾಡಲು,
ಬಂತು ನಮಗೆ ಸ್ವಾತಂತ್ರ್ಯ!
ನಮ್ಮದೇ ಆದ ಗುಂಪುಗಳ ಕಟ್ಟಿಕೊಳ್ಳಲು,
ಗಲ್ಲಿ ಗಲ್ಲಿಯಲಿ ಮತ ಕೇಳಿ ಪೊಳ್ಳು ಭರವಸೆ ನೀಡಲು,
ರಸ್ತೆಯಗಲಿಸಲು ಹಳೆ ಮರಗಳ ಕಡಿದು ಮಾರಲು!
ಬಂತು ನಮಗೆ ಸ್ವಾತಂತ್ರ್ಯ!
ಹೊಸ ಹೊಸ ಪಕ್ಷ ಕಟ್ಟಲು,
ಮತ ಹಾಕಲು,ಹಾಕದೆ ಇರಲು,
ಅಲ್ಲಲ್ಲಿ ಬಂದ್ ಮಾಡಿ ಸಿಕ್ಕಿದ್ದ ಸುಡಲು,
ಬಂತು ನಮಗೆ ಸ್ವಾತಂತ್ರ್ಯ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ