ಆಸೆ
ನಾ ನಿನ್ನ ಮಡಿಲಲಿ ಮಗುವಾಗುವಾಸೆ
ಮಳೆ ಹನಿಗಳ ನಡುವೆ ನಿನ್ನ ಕೈಹಿಡಿದು ಮುತ್ತಿಡುವಾಸೆ
ನೂಪುರವ ತೊಟ್ಟು ಝಣಝಣವೆನುತ ನಿನ್ನ ಬಳಿ ಓಡಾಡುವಾಸೆ
ನವಿಲಂತೆ ಕುಣಿಯುತಲಿ ನಿನ್ನ ಸುತ್ತಮುತ್ತ ನರ್ತಿಸುವಾಸೆ
ಮನದಣಿಯೆ ಮನದರಸ ನಿನ್ನೊಡಲ ಒಳಸೇರಿ ನಿನ್ನಲ್ಲಿ ನೀನಾಗುವಾಸೆ.
ನಗೆಬುಗ್ಗೆಯ ಚಿಮ್ಮಿಸಿ ನಗೆಗಡಲಲಿ ನಿನ್ನೊಂದಿಗೆ ತೇಲಾಡುವಾಸೆ
ಕೈಯೊಳಗೆ ಕೈಯಿಟ್ಟು, ಕಣ್ಣೊಳಗೆ ಕಣ್ಣಿಟ್ಟು ನನ್ನೆ ನಾ ನೋಡುವಾಸೆ
ನಿನ್ನ ಗುಳಿಕೆನ್ನೆಯಲಿ ನನ್ನೆ ನಾ ದೂಡಿಕೊಂಡು ಬೀಳುವಾಸೆ
ಹಾರು ರಥದಲಿ ನಿನ್ನೊಡನೆ ನಭದಲಿ ಜಾರಿ ಹೋಗುವಾಸೆ..
ನಿನ್ನ ತೊಡೆಯಲಿ ಕುಳಿತು ಎದೆ ಮೇಲೆ ತಲೆಯಿಟ್ಟು ಎಡೆಬಡಿತ ಆಲಿಸುವಾಸೆ
ದೂರದ ದ್ವೀಪದಲಿ ತಿಳಿ ನೀರ ಬಳಿಯಲಿ ನಿನ್ನ ಬಳಸಿ ನಿಲ್ಲುವಾಸೆ
ಸುಯ್ಯೆಂದು ಸಾಗುವ ನಾವೆಯಲಿ ನಿನ್ನೊಡನೆ ಕುಳಿತು ಸಾಗುವಾಸೆ
ತಲೆ ಮೇಲೆ ಮುಖವಿಟ್ಟು ಗಲ್ಲದಲಿ ಬೆರಳಿಟ್ಟು ಫೋಟೋ ತೆಗೆವಾಸೆ!
ಹನಿ ನೀರ ಮುತ್ತುಗಳ ಎಡೆಬಿಡದೆ ನಿನಗೆರಚಿ ತಣಿಸುವಾಸೆ
@ಪ್ರೇಮ್@
12.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ