ಭಾವಗೀತೆ
ಪೂರ್ಣ ಚಂದಿರ
ಬಹಳ ಸುಂದರ ಬಾಳ ಚಂದಿರ
ನಗುತಲಿರಲು ಮನವು ಮಧುರ
ಇರುಳ ಬೆಳಗುವ ನಗೆಯು ಚಂದ
ಬಾಳ ಬೆಳಗೆ ತುಸು ಕೋಪ ಅಂದ
ಕಣ್ಣಿನಲ್ಲೇ ಕ್ಲಿಕ್ಕಿಸಿ ನನ್ನ ಸೆರೆಹಿಡಿದ
ಗುಳಿಕೆನ್ನೆಯಲ್ಲೆ ಪ್ರೀತಿ ಬೀಳಿಸಿದ!
ನಲಿದು ಕುಣಿದು ಖುಷಿಯ ತಂದ
ಪ್ರತಿ ಮಾತಿನಲ್ಲೆ ಪ್ರೀತಿ ಪದವನಾಡಿದ
ಬಾಳು ಕೊಟ್ಟು ಹೃದಯ ನೀಡಿದ
ಜ್ಯೋತಿ ಬೆಳಗಿಸಿ ನನಗಾಗಿ ಬೇಡಿದ..
ದಯೆಯ ಕಂದ ಮನವು ಅಂದ
ಬಾಳ ಮಿತ್ರನು ಬದುಕಾನಂದ
ನಗೆಯ ಕಾರಂಜಿಯ ಚಿಮ್ಮುತ
ಸೊಗಸ ಕ್ಷಣಗಳ ಪೋಣಿಸುತ್ತ..
@ಪ್ರೇಮ್@
06.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ