ಗುರುವಾರ, ಏಪ್ರಿಲ್ 16, 2020

1400. ಸಂಗಮದಲಿ ಸಂಗಮವಾಗಿ

ಸಂಗಮದಲಿ ಸಂಗಮವಾಗಿ..

ಸಂಘದಲಿ ಸಂಭ್ರಮಿಸುವೆ
ಸನಿಹವೆ ಸರಿಯುತಲಿ
ಸರಿ ತಪ್ಪನು ಸವಿಯುತಿಹೆ
ಸ್ನೇಹ ಸಂಗಮದಲ್ಲಿ!

ಸವಿಯಲೆಯನು ಸವೆಸುತಲಿ
ಸವಿನೆನಪ ಸ್ಮರಿಸುತಲಿ
ಸವಿಗಾನವ ಸೃಷ್ಟಿಸುತ
ಸವಿ ಪದಗಳ ಕಟ್ಟುತಲಿ..

ಸದೃಢತೆಯ ಮನಸಿಗೀಗ
ಸಾಂತ್ವನವ ನೀಡುತಲಿ
ಸವಿನಯದ ಪ್ರಾರ್ಥನೆಯ
ಸರ್ವರಿಗೂ ಹಂಚುತಲಿ..

ಸಾವಿರದ ಸಾವಿರ ಪದ
ಸರಿಯಾಗಿ ಬಳಸುತಲಿ
ಸನ್ನಿಧಿಯಲಿ ಸವಿಮನವು
ಸಂಧಿಸುವ ಬಳಗದಲಿ!

ಸಾವಿಲ್ಲದ ಸಾಹಿತ್ಯಕೆ
ಸಾಲಾಗಿ ತಲೆ ಬಾಗುತಲಿ
ಸಾಮಾನ್ಯನೂ ಓದುವಂಥ
ಸಾಲುಗಳ ಸವಿದೋಟದಲಿ..
@ಪ್ರೇಮ್@
08.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ