ಸೋಮವಾರ, ಏಪ್ರಿಲ್ 6, 2020

1351. ಬದುಕಿನಾಟ

ಬದುಕಿನಾಟ

ನನ್ನ ಬಾಳ ಹೊತ್ತಿಗೆಯಲಿ
ಸಾವಿರಾರು ಪುಟದ ನೆನಪುಗಳು
ಸಿಹಿ -ಕಹಿಯು ಸಾಲು ಕಟ್ಟಿದಂತೆ
ಮರೆಯಲಾಗದ ಕ್ಷಣಗಳು...

ಅಮ್ಮನ ಆರೈಕೆ ಸಹಪಾಠಿಗಳ ಓಲೈಕೆ
ಮುದ್ದು ಗೆಳೆಯರ ಕೂಡುವಿಕೆ
ಬಂಧುಗಳ ಮಾತು ಅಕ್ಕ-ಪಕ್ಕದವರ ನೆರವು ಸಾಕೆ?
ಸಂಗಾತಿಯೊಲವ ಮಧುಕ ಕರೆ ಬೇಕೆ?

ವಂಚನೆಯ ಮಾತಿಲ್ಲ ಸತ್ಯವೇ ಎಲ್ಲ
ಬದುಕ ಗಾಡಿಯ ಮೇಲೆ ಬೆಲೆ ಕಲಿಕೆಗಲ್ಲ?
'ಕಲಿಯುಗವು ಕಲಿಯುತಿರು"
 ಎಂಬುದು ಗುರುವಿನ ಸೊಲ್ಲು!!

ಬೇಸರವ ಹೋಗಿಸಲು ಪ್ರಾಣ ಸ್ನೇಹಿತರು
ಆಗಾಗ ಕರೆಯಲು ನೆಂಟರಿಷ್ಟರು!
ಸಹಪಾಠಿ ಮಿತ್ರರ ಒಲವ ಸಹಕಾರ 
ಮರೆಯಲುಂಟೆ ಗುರು-ಹಿರಿಯರ ಸಾರ?

ತಂಗಿ-ತಮ್ಮಂದಿರ ಒಡನಾಟ ಚೆನ್ನ
ಮುದ್ದು ಮಕ್ಕಳ ಜೊತೆ ಸಮಯ ಹೊನ್ನು
ವಿದ್ಯಾರ್ಥಿಗಳೊಡನೆ ಆಟ-ಪಾಠ
ಸಂಗಾತಿ ಜೊತೆ ಜೀವನದಾಟ...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ