ಸೋಮವಾರ, ಏಪ್ರಿಲ್ 6, 2020

1337. ಭಾವಗೀತೆ-ನನ್ನುಸಿರೇ

ನನ್ನುಸಿರೇ...

ಎದೆಯ ಬಾನಿನಲ್ಲಿ 
ಹರಡಿಹೆ ನೀ ಮೋಡವಾಗಿ!
ನಾ ಧರೆಯಾದರೆ
ನೀ ನನ್ನ ಬೆಳಗೊ ಭಾನಲ್ಲವೇ?
ಪ್ರತಿ ದಿನದ ಬೆಳಗು
ನಿನ್ನಿಂದಲ್ಲವೇ ಪ್ರಾರಂಭ?

ನೀ ಬರದೆ ಬುವಿಯ 
ಬಾಳು ಬೆಳಗಲುಂಟೇ?
ನೀನಿರದೆ ಹಸಿರು ಗಿಡ
ಬಣ್ಣದ ಹೂ ಅರಳಲುಂಟೇ?

ಕೋಗಿಲೆಯ ಕುಹೂ ದನಿಯ
ಇಂಪಲ್ಲವೇ ನೀನು?
ಚಂದಿರನ ಹಾಲು ಬೆಳದಿಂಗಳಿನ 
ತಂಪಲ್ಲವೇ ನೀನು?

ಮುದ್ದಿನ ರಾಜನೆ
ಇರವೆ ನೀ ನನ್ನೊಡನೆ ಸದಾ
ನನ್ನೀ ಜೀವನ ನಿನಗಾಗೆ
ಮುಡಿಪಾಗಿಗಿರಿಸಿರುವೆ ಇದಾ..

ತನ್ಮಯಳಾಗಿಹೆ ನಿನ್ನೀ ಪ್ರೀತಿಗೆ
ಕ್ಷಣ ಕ್ಷಣ ನೆನಪಿಗೆ
ನಾನೇ ನೀನು
ನೀನೇ ನಾನು
ನಡುವಲಿ ಬೇರಿದೆ ಇನ್ನೇನು?

ಇದೋ ಅರ್ಪಿಸಿರುವೆ
ನನ್ನದೆಲ್ಲವನೂ.. ನನ್ನೀ ಉಸಿರಿಗೆ..
ನನ್ನೀ ಪ್ರೀತಿಗೆ.. ನನ್ನೀ ಹೃದಯಕೆ..
ನನ್ನೀ ಮನಸಿಗೆ...ನಿನ್ನೀ ಪದತಳಕೆ..
@ಪ್ರೇಮ್@
05.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ