ಕರುಳಬಳ್ಳಿ
ನನ್ನ ಎದೆಯ ಭಾವದಿಂದ
ಇಳಿದ ಕರುಳ ಬಳ್ಳಿ..
ಹೃದಯದಿಂದ ಕೈಗೆ ಇಳಿದ
ಹಾಡು ಇದೆ ಇಲ್ಲಿ..
ಜಪವು ತಪವು ಬೇಡವದಕೆ
ಮನದಿ ನಿತ್ಯ ನರ್ತನ
ಭವದ ದ್ವಾರ ಸರಿಸಿ ಬಂತು
ಕಾವ್ಯ ಧಾರೆ ಕೀರ್ತನ..
ನನ್ನ ಕವನ ನನ್ನ ಮಗುವು
ಬಂದು ನಲಿಯುತಿರುವುದು
ಮೇಲೆ ಕೆಳಗೆ ಜಗ್ಗಿ ನನ್ನ
ಆಟ ಆಡುತಿರುವುದು..
ಬಾಳಿನಲ್ಲಿ ಒಂಟಿತನವ
ದೂರ ಸರಿಸುತಿರುವುದು
ಪದಗಳೆಲ್ಲ ಒಟ್ಟು ಸೇರಿ
ಆಟವಾಡುತಿರುವುದು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ