ಶನಿವಾರ, ಏಪ್ರಿಲ್ 18, 2020

1403. ಸಣ್ಣಕತೆ-ಕಾರಣ

ಕಾರಣ

ಮದುವೆಯಾಗಿ ಬೇರೆಯವರ ಸಂತಸ ಸಿಗಲಿಲ್ಲ ಮಂಗಳ ಎಂಬ ಸುಮಂಗಲೆಗೆ. ಮದುವೆಯಾದ ಮರುದಿನವೇ ಗಂಡನೆಂಬ ಪ್ರಾಣಿ ಅವಳ ಮೇಲೆ ತನ್ನದೆಂಬಂತೆ ಒಂದು ಮಾತನ್ನೂ ಆಡದೆ ಪ್ರಹಾರ ನಡೆಸಿದ್ದೇ ಅಲ್ಲದೆ, ಅವಳ ಆಸೆಯೇನು ಎಂಬುದನ್ನೂ ಕೇಳಲಿಲ್ಲ, ಮುದ್ದಿಸಲೂ ಇಲ್ಲ. ಯಾರಿಗೋ ಸಂಬಂಧಿಸಿದ ವಸ್ತುವನ್ನು ತನ್ನಿಷ್ಟ ಬಂದಂತೆ ತಾನು ಬಳಸಿದ ಬಳಿಕ ಸುಸ್ತಾಗಿ  ನಿದ್ರಿಸುತ್ತಿದ್ದವನನ್ನು ನೋಡಿ ಚಾಕು ಹಾಕಿ ಕೊಲ್ಲುವಷ್ಟು ಸಿಟ್ಟು ಬಂದಿತ್ತು ಮಂಗಳಾಗೆ! 

ಆದರೂ ಮದುವೆ ಎಂಬುದು ತನ್ನ ಜೀವನದಲ್ಲಿ ನಡೆದಾಗಿದೆಯಲ್ಲ! ಸಾವರಿಸಿ, ರಾತ್ರಿಯಿಡೀ ಕಣ್ಣೀರು ಹಾಕಿ ಹಗಲಲ್ಲೆ ಮನೆ ಬಿಟ್ಟು ದೂರ ಹೋಗಲು ನಿರ್ಧರಿಸಿದಳು. ಬೆಳಗ್ಗೆ ಮಂಗಳಾಳನ್ನು ಕಾಣದ ಪತಿರಾಯ ಪತ್ರಿಕೆಗಳಲ್ಲೆಲ್ಲಾ ತನ್ನ ಮಡದಿ ತನ್ನ ಪ್ರಿಯಕರನೊಡನೆ ಓಡಿ ಹೋಗಿದ್ದಾಳೆಂಬ ಸುದ್ದಿ ಕೊಟ್ಟ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ