ಶನಿವಾರ, ಏಪ್ರಿಲ್ 18, 2020

1405. ವಿಮರ್ಶೆ-ಶ್ಯಾಮ್ ಸುಂದರ್ ಸರ್-ನನ್ನವಳು

*ಶ್ಯಾಮ ಗುರುಗಳ ನನ್ನವಳು*
(ಭಾವಗೀತೆ)

💐 *ಮದುವೆಯ ದಿನದ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರುತ್ತಾ ತಮ್ಮ ಕವನವ ವಿಮರ್ಶಿಸುವ ಸುಯೋಗವನ್ನಿಂದು ಪಡೆದಿರುವೆ ಗುರುವರ್ಯ, ಹರಸಿ ಆಶೀರ್ವದಿಸಿ.* 💐

ಮೂರೊಂದು ದಶಕವೂ
ಕಳೆದು ಹೋಯಿತು ಇಂದು
ಸೇರಿತುಳಿದು ನಾವು ಸಪ್ತಪದಿಯ
ಯಾರೋಹೆತ್ತಾ ಮಗಳು
ಬಂದು ಸೇರಿದೆಯೆನ್ನ
ತೇರಾನೆಳೆಯಲು ಜೊತೆಗೆ ನೀಡಿ ಕೈಯ್ಯಾ

💐 *ವಾರೆವಾ.. ಅಮ್ಮನ ನಾಚಿ ನೀರಾಗಿಸಲು ಈ ಸಾಲುಗಳೇ ಸಾಕು. ಪ್ರೀತಿಯಲಿ ಅದ್ದಿ ತೆಗೆದ ಸಾಲುಗಳವು.*
💐 *ಕೆಲವೊಂದು ಟೈಪಿಂಗ್ ದೋಷಗಳಿವೆ ಸರ್. ಸೇರಿ- ತುಳಿದು , ಯಾರೋ-ಹೆತ್ತ ಪದಗಳ ನಡುವೆ ಗ್ಯಾಪ್ ಬೇಕಾಗಿದೆ. ಹೆತ್ತಾ ದೀರ್ಘವಾಗಿದೆ. ತೇರನೆಳೆಯಲು ಆಗಬೇಕಿದೆ. ರಾ ಬಗ್ಗಿದೆ. ಕೈಯಾ...ಕೈಯ ಎರಡೂ ಸರಿ. ರಾಗವಾಗಿ ಹಾಡುವಾಗ ಎಳೆಯಬೇಕಾಗುತ್ತದೆ. ಅರ್ಥಗರ್ಭಿತ ಸಾಲುಗಳು.*💐

ಯೋಗಲಕ್ಷ್ಮೀಯಂತೆ
ಮನೆಯನ್ನು ಬೆಳಗೀದೆ 
ಬೇಗನೊಂದು ಮಗಳ ಹೆತ್ತು ಕೊಟ್ಟೇ
ಯಾಗವೆನ್ನುತಲೆನ್ನ
ತಂದೆತಾಯ್ಗಳ ಸೇವೆ 
ಮೂಗಾನೇರಿಪುವಂತೆ ಮಾಡಿಬಿಟ್ಟೆ.
💐 *ಆಹಾ..ಹೀಗೆ ಹೊಗಳಿದಾಗ ಮನದನ್ನೆ ಸೊರಗಿ ಹೋಗದೆ ಉಬ್ಬಿ ಹೋಗುವರು ಗುರುವರ್ಯ. ಪ್ರತಿಕ್ಷಣದ ಕಾರ್ಯಕೂ ನೆನಪಲ್ಲೆ ಥ್ಯಾಂಕ್ಸ್ ಹೇಳಿದಂತಿದೆ.*💐
💐 *ಕೆಲವೊಂದು ಅಕ್ಷರಗಳ ಕೊಂಬುಗಳು ಪ್ರೀತಿಯಲಿ ಹೆಚ್ಚು ಬಾಗಿಬಿಟ್ಟಿವೆ! ಹೆಚ್ಚಾಗಿ ದೀರ್ಘವನ್ನೂ ಪಡೆದಿವೆಯಲ್ಲ ಗುರುಗಳೇ..ಲಕ್ಷ್ಮೀ, ಬೆಳಗೀದೆ, ಕೊಟ್ಟೇ,ಮೂಗಾ... ಸರಿಯಾಗಬೇಕಿದೆ ನೋಡಿ. ತಂದೆತಾಯಿ ಅಂಟಿ ಹೋಗಿರುವರು. ಸಾಮಾಜಿಕ ಅಂತರ ಕಾಯ್ದಿರಿಸಬೇಕಲ್ಲವೇ ಪದಗಳಲಿ?* 💐

ಕಷ್ಟಗಳ ಸುರಿಮಳೆಯು
ಬಂದು ಅಪ್ಪಳಿಸಿರಲು
ಬೆಟ್ಟದಂತೆ ನೀನು ಸಹಿಸಿ ಕೊಂಡೇ
ದುಷ್ಟಕತ್ತಲೆ ಕಳೆದು 
ಬೆಳಕ ಕಂಡಿಹೆವಿಂದು
ಇಷ್ಟ ನರಸಿಂಹ ಕಣ್ಬಿಟ್ಟು ನೋಡೇ

💐 *ಜೀವನವೇ ಸುಖ ದು:ಖಗಳ ಸಾಲು. ಅರಿತು ನಡೆವವನೇ ಮನುಜ. ಪಾಣಿಗ್ರಹಣದ ಸಮಯವೇ ಸುಖ ದು:ಖಗಳಲಿ ಒಂದಾಗಿ ಅರಿತು ನಡೆವ ದೀಕ್ಷೆ ತೆಗೆದುಕೊಂಡು ಅಂತೆಯೇ ನಡೆವವರು ಜಗದಲಿ ಹಲವರು. ಅಂತಹ ಸಹಧರ್ಮಿಣಿಯ ಜತೆ ಪಡೆದ ಸುಯೋಗ ತಮ್ಮದು. ಖುಷಿಯಾಯ್ತು ಸಾಲುಗಳನೋದಿ.* 💐
   💐 *ನೋಡೇ, ಸಹಿಸಿಕೊಂಡೇ ಉದ್ದವಾಗಿವೆ. ದುಷ್ಟ ಕತ್ತಲು ರೂಪಕ ತುಂಬಾ ಹಿಡಿಸಿತು.* 💐

💐 *ಸಾರ್ಥಕ ಜೀವನದ ಮಾದರಿಯ ತೋರಿಸಿಕೊಟ್ಟ ನಿಮಗಿದೋ ಅಭಿನಂದನೆಗಳು. ಕಿರಿಯರು ನಿಮ್ಮಿಂದ ಕಲಿಯುವುದು ಬಹಳವಿದೆ. ಮರದಡಿ ಕುಳಿತರೆ ತಂಪೆರೆವಂತೆ ತಾವು ಸಲಹೆ, ಸೂಚನೆ, ವರಗಳ ನೆರಳ ಸ್ಫುರಿಸಬೇಕಿದೆ. ಹೀಗೇ ಸಂತಸದಿ ಬಾಳಿ. ಸದಾಶಯಗಳು ಹಾಗೂ ಶುಭಾಶಯಗಳು ನಿಮಗೀರ್ವರಿಗೂ* 💐💐
@ಪ್ರೇಮ್@
18.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ