*ಸುಮಧುರ ಬದುಕು*
*ಸಮರವು ಬೇಡವು ಸುಮಧುರ ಬಾಳಲಿ*
*ಸಮರಸ ಜೀವನ ನಡೆಸುವ ಸಾಲಲಿ*//
*ಮನದಲಿ ಸಂತಸ ಮನೆಯಲಿ ಸಾಹಸ*
*ಉತ್ಸಾಹ ತರುತಲಿ ನವೀನ ಭಾವಕೆ*
*ವದನದಿ ನಗುವೂ, ಮಾತಲಿ ಸತ್ಯವು*
*ಸುಖಮಯ ಜೀವಕೆ ಬೇಕದು ನಿತ್ಯವು*//
*ನೀತಿಯು ಇರಲು ಪ್ರೀತಿಯ ಮಾತದು*
*ಸೂಕ್ತವು ಜಗದಲಿ ಚಿನ್ಮಯ ಸೂಕ್ತಿಯು*
*ಮಂಗಳ ವಾದ್ಯದ ಗಾನದ ಜೊತೆಗದು*
*ನಯನದ ಚೆಲ್ಲಾಟ ಹರಿವಿನ ಗೀತೆಯು*//
*ವಿಷಯದ ಆಳಕೆ ನಿಶೆಯಲಿ ಸೇರುತ*
*ಮನಸಿನ ಬಯಕೆಗೆ ಬೇಲಿಯ ಕಟ್ಟುತ*
*ಸವಿನುಡಿ ಸವಿಮನ ಆಸರೆ ಎಂದಿಗು*
*ಬೆರೆಯುತ ಸಾಗಲು ಕಷ್ಟವ ಮುರಿಯುತ*//
@ಪ್ರೇಮ್@
10.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ