ಹನಿಗವನಗಳು
ಕರೆ
ಕವಿತೆಗಳ ಮಾಲೆಗಳ
ಪೋಣಿಸಿ ನಿನ್ನ ಮುಡಿಗಿಡುವೆ
ಸಪ್ತ ಸಾಗರಗಳನೀರನೆ
ನಿನ್ನ ಕಾಲ ಬುಡದಲಿರಿಸುವೆ
ಸೂರ್ಯನನೆ ಬಿಂದಿಯಾಗಿರಿಸಿ
ಪ್ರಕೃತಿಯ ಹಸಿರನೆ ಸೀರೆಯಾಗುಡಿಸುವೆ
ಶೃಂಗಾರಗೊಂಡ ಚೆಂದುಳ್ಳಿ ನೀ
ಕಾಲು ತೊಳೆದು ಬಾರೆನ್ನ ಎದೆಗುಡಿಗೆ!
2. ಆಹ್ವಾನ
ಮುತ್ತಿನ ಸಾಲಿನಲಿ ನಿನ್ನ ಮುಳುಗಿಸಿ
ಹತ್ತಿಯ ಮಂಚದಲಿ ನಿನ್ನ ಮಲಗಿಸಿ
ಶಕ್ತಿಯಲಿ ನನ್ನರಸ ನಿನ್ನ ನಗಿಸುತಲಿ
ಭಕ್ತಿಯಲಿ ನಿನ್ನ ಪ್ರೇಮವ ಪೂಜಿಸುತಲಿ
ನಿತ್ಯದಿ ನನ್ನುಸಿರಾಗಿಸುವೆ ನನ್ನ ಹೃದಯದಲಿ
ಬಾರೆನ್ನ ಎದೆಯ ರಂಗಮಂಚಕೆ ಸಖನೇ...
@ಪ್ರೇಮ್@
15.04.2020
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ