*ಮನದೊಂದಿಗೆ*
*ನಾನೆ ನೀನು ನೀನೆ ನಾನು*
*ನಮ್ಮ ನಡುವೆ ಏನಿದೆ?*
*ಭಕ್ತಿ ನಾನು ಪ್ರೀತಿ ನೀನು*
*ಬೇರೆ ಬದುಕು ಎಲ್ಲಿದೆ?*
*ಜಾತಿ ಮತವು ನಮಗೆ ಎಲ್ಲಿ?*
*ತನುವು ನಿನ್ನಲೈಕ್ಯವು*
*ಕ್ರಾಂತಿ ಹಿತವು ನೀಡದಿಲ್ಲಿ*
*ಮುರಿಯದಿರಲಿ ಮೌನವು.*
*ಜ್ಯೋತಿ ನಾನು ಸ್ಫೂರ್ತಿ ನೀನು*
*ಸತ್ಯವಿಲ್ಲಿ ಜಗದಲಿ.*
*ಶಾಂತಿ ನಾನು ಕೀರ್ತಿ ನೀನು*
*ಮಿಥ್ಯವೆಲ್ಲಿ ಭವದಲಿ?*
*ನೀತಿ ಇರಲಿ ಶಕ್ತಿ ಬರಲಿ*
*ಹರುಷ ಎಂದೂ ಬಾಳಿಗೆ!*
*ಮುಕ್ತಿ ಬೇಕು ಯುಕ್ತಿ ಸಾಕು*
*ಹಸಿರ ಭಾವ ಬಳ್ಳಿಗೆ!*
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ