ಭಾವಗೀತೆ
ಊರ್ಮಿಳೆಯ ಭಾವ
ಊರ್ಮಿಳೆ ಒಬ್ಬಳ ಲಕ್ಷ್ಮಣ ಬಿಟ್ಟು
ಹೋದನು ಕಾಡಿಗೆ ರಾಮನ ಒಟ್ಟು..
ಬರುವೆಯಾ ಎಂದು ಕೇಳಲೇ ಇಲ್ಲ
ಹೋಗುವ ಆಸೆಗೆ ಮನದಲೆ ಸಾವು//
ಭಯ ಆತಂಕ ಗೊಂದಲ ನೋವು
ಒಂಟಿತನದ ಬಾಳಿಗೆ ಇಲ್ಲವು ಕಾವು.
ಬದುಕಲೇ ಬೇಕು ಮರೆತು ಎಲ್ಲವನೂ
ರಾಜರ ಮನೆಯ ಸೊಸೆಯು ತಾನು.
ಸೀತೆಗೆ ಇಹುದು ಪತಿಯ ಜೋಡಿ
ತನಗೆ ಇಲ್ಲಿ ಯಾರದು ಮೋಡಿ?
ತಿಳಿಯದೆ ಪತಿಗೆ ಸತಿಯ ಮನವು
ಸತಿಗಿಂತಲು ಮೇಲು ಅಣ್ಣನ ಒಲವು..
ಕರೆಯಲು ಬಾರದೆ ನೀ ಬಾರೆಂದು
ಹೋಗಲು ತಾನು ಯೋಚಿಸೆನೆಂದು
ಪತಿ ಕರೆದೊಡೆ ಹೇಳೆ ಒಲ್ಲೆನೆಂದು
ಸತಿ ಪತಿ ಜೊತೆಯಲಿ ಇರುವುದೇ ಸಿಂಧು...
@ಪ್ರೇಮ್@
18.04.2020
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ