ಸೋಮವಾರ, ಏಪ್ರಿಲ್ 6, 2020

1362. ನಮನ

ನಮನ

ಮನದಲಿ ಮೂಡಿಪ ರೂಪಕೆ ಮಣಿವೆನು..
ನೆನಪಲಿ ಕಾಡಿದ ಯೋಗಿಗೆ ಮಣಿವೆನು..
ಬುವಿಯಲಿ ನನ್ನಯ ಜೀವವ ತಂದಾ
ಶಕ್ತಿಯು ಎನ್ನುವ ದೇವಗೆ ಮಣಿವೆನು...//

ಭಾವನೆ ಮನದಲಿ ತುಂಬಿಸಿ ಬಿಟ್ಟನು
ಕಾಮನೆ ಬಿಡಲದು ಸಲಹೆಯ ಕೊಟ್ಟನು!
ಮಾನವನಾಗಿಹೆ ನಡತೆಯ ಕಲಿಯಲು,
ದಾನವ ಗುಣವನು ತೊರೆಯಲು ತಿಳಿಸುತ..//

ಕಾಣದ ಲೋಕಕೆ  ತೆರಳುತ ನುಡಿದನು
"ನಿನ್ನಯ ಜೀವನ ರೂಪಿಸಿ ಬದುಕಲು,
ಮೋಸವ ಮಾಡದೆ ಬಾಳನು ಬೆಳಗಲು,
ನ್ಯಾಯದ ಹಾದಿಯ ಹಿಡಿಯುತ ನಡೆಯಲು//

ಅರಿವನು ಕೊಡುತಲಿ ಹೃದಯವಂತಿಕೆಯ
ಬೆಳೆಸುತ, ಬಡವರ ಕಣ್ಣೀರೊರೆಸುತ,
ಹಲವಗೆ ಸಹಾಯ ಮಾಡುತ ಬಾಳಲು
ನೆಮ್ಮದಿ ಸಿಗುವುದು ಮೈಮನ ತಣಿವುದು..//

ಭೂಮಿಗೆ ಬಂದರೆ ಕುರುಹನು ಬಿಡುತಲಿ,
ಜೇವನ ಪಾವನ ಮಾಡುತ ನಲಿಯುತ
ತನ್ನಯ ಆತ್ಮದಿ ದೇವನ ಕರೆಯುತ
ನಗೆಯನು ಎಸೆಯುತ ಬಾಳ್ವೆಯ ಮಾಡುತ..//

ನನ್ನದು ಎನ್ನುವ ಮಾತದು ಏತಕೆ?
ನಮ್ಮದು ಎಂದರೆ ಸರ್ವಗೆ ಹಿತಕರ.
ಬಾಳಲಿ ಅಂದದ ಗೂಡನು ನೋಡುವೆ
ಇಲ್ಲದೆ ಇದ್ದರೆ ಗುಂಡಿಗೆ ಬೀಳುವೆ..//

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ