ಸೋಮವಾರ, ಏಪ್ರಿಲ್ 6, 2020

1338. ನಿನಗಾಗಿ

ನಿನಗಾಗಿ

ನೀ ನನ್ನ ಜೀವ
ಜೀವದಾ ಜೀವ
ಜತೆಯಿರಲು ದಿನವೂ
ಹೊಸ ಹೊಸ ಭಾವ..

ಮನವದು ಮಲ್ಲಿಗೆಯು
ಸಿಹಿಯಾದ ಮಾತು
ಗಮನವು ನಿತ್ಯ
ನೀ ನನ್ನ ಬಲವು

ನೋವಲೂ ನಲಿವು
ನೀ ಜೊತೆಯಿರಲು
ಬಾಳು ಬಂಗಾರ
ನಿನ್ನ ಕೃಪೆಯಿರಲು

ಪ್ರೀತಿಯ ಮಾತುಗಳು
ನೂರೆಂಟು ದಿನವೂ
ನಲಿವಿನ ಭಾವ
ನೀ ಜೊತೆಗಿರಲು

ನನ್ನ ಪ್ರಪಂಚ
ನಿನ್ನ ಹೊರತಾಗಿಲ್ಲ
ಕನಸುಗಳ ಅಧಿಪತಿ
ಬೇರೆ ಯಾರಿಲ್ಲ!

ಮನದಲ್ಲಿ ಸೌಧವನು
ನೀ ಕಟ್ಟಿರುವೆಯಲ್ಲ
ಪ್ರೀತಿಯಾ ತೇರನು
ಎಳೆಯುತಿಹೆಯಲ್ಲ

ಬಂಗಾರ ಬದುಕಿಗೆ
ನೀನಿರೆ ಅಂದವು
ಸಿಂಗಾರ ನಿನ್ನ
ಮಾತಿನ ಮೋಡಿಯು

ತೇಲುತಿಹೆ ನಾನು
ಪ್ರೀತಿಯ ನೌಕೆಯಲಿ
ನೀ ಹುಟ್ಟು ಹಾಕುತಲಿ
ಸಾಗುತಿಹೆ ನಾನು

ಧರೆಯಲಿ ಸಂತಸವು
ನಿತ್ಯ ನಿನ್ನಿಂದ
ನಿನ್ನೊಲವಿಗೆ ಸರಿಸಾಟಿ
ಮತ್ತೇನೂ ಇಲ್ಲ!

ಗಗನದಲಿ ಹಾರುತಿಗೊಹೆ
ನಿನ್ನ ಪ್ರೀತಿ ಹಿಡಿದು
ಗಾಳಿಪಟ ನಾನೀಗ
ದಾರ ನಿನ್ನ ಕೈಲಿ..

ನವಿಲಿನ ನರ್ತನವು
ನೀನಿರಲು ಬಾಳಲ್ಲಿ
ಪಂಕದಂತೆ ತಿರುಗುತಿಹೆ
ಶಕ್ತಿಯೂ ನೀನೇ

ಅಮ್ಮನಂಥ ಮನಸು
ನೀ ಕನಸ ಗುರುವು
ಮೈಮನವೀಗ ಹಗುರ
ಈ ನಿನ್ನ ಇರವು

ಜೊತೆಯಾಗೆ ಇರುವೆ
ನನಗೆಂದೂ ನೀನೇ
ಮರೆಯಲಾರೆ ಒಲವೇ
ನನ್ನ ಪ್ರಾಣ ನೀನೇ..
@ಪ್ರೇಮ್@
02.04.2020

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ