ಒಲವ ಹುಡುಕಿ...
ಮನದ ಮಹಲಿನ ಒಳಗೆ
ನೆನಪಿನದೇ ಮೆರವಣಿಗೆ...
ಹೊಳೆವ ನಯನದ ತುಂಬಾ
ನಿನ್ನದೇ ಪುರವಣಿಗೆ...
ಕಾಡುವ ಕನಸಿಗೂ
ಕೋರಿಕೆ ಕಳುಹಿಸಿರುವೆ
ನನ್ನ ಕನಸರಾಶಿ ನನಸಾಗಿ
ನೆನಪಲಿ ಮೈ ಮರೆಸು ಎಂದು ...
ನೊರೆ ಹಾಲಿನಂತಹ ಪ್ರೀತಿ
ವಿಷವಾಗಿ ಒಡೆಯಿತು
ಕಾರಣ ಅರಸಿ ಹೊರಟಿರುವೆ
ಸೋತು ಶರಣಾಗಿರುವೆ ...
ಮದನಾರಿ ನಿನ್ನ ಮೋಹದ
ಬಲೆಯೊಳಗೆ ಮೈಮರೆತು
ಮನಸ್ಸು ಮರುಳಾಯಿತು
ಕನಸ ಕೊಲೆಯಾಯಿತು
ಆ ಕೆಂಪು ಸೂರ್ಯನಂತೆ
ಸುಡುತ್ತಿದೆ ನನ್ನ ಹೃದಯ
ಉಸಿರು ಉಳಿಯಬೇಕಿದೆ
ಸುರಿಸು ಬಾ ಒಲವ ಮಳೆಯಾ
❤ತುರುವೇಕೆರೆ❤ ತುಂಟ
🌹ರಮೇಶ್ 🌹
ಒಲವ ಹುಡುಕಿ...
ಮನದ ಮಹಲಿನ ಒಳಗೆ
ನೆನಪಿನದೇ ಮೆರವಣಿಗೆ...
🍑ವಾವ್ ! ಎಂತಹ ಅರ್ಥಗರ್ಭಿತ ಸಾಲು... ಮನದ ಮಹಲೆಂಬ ರೂಪಕ ಬೇರೆ ...ನೆನಪಿನ ಮೆರವಣಿಗೆಯೆಂಬ ಪರ್ಸಾನಿಫಿಕೇಶನ್... ಸಕತ್ತಾಗಿದೆ... ಚಿತ್ರಕವಿತ್ವವೂ ಮೂಡಿ ಬಂದಿದೆ....ಇದೇ ಸಾಲಿನಲ್ಲಿ ಕವಿ ಅದೆಷ್ಟು ಕಸರತ್ತು ಮಾಡಿರುವರು...ಆಹಾ...ಓದುಗರೇ ಧನ್ಯರು....🍑
ಹೊಳೆವ ನಯನದ ತುಂಬಾ
ನಿನ್ನದೇ ಪುರವಣಿಗೆ...
🍊ಹೊಳೆವ ನಯನವೆಂಬ ನಾಮ ವಿಶೇಷಣದೊಂದಿಗೆ ಪ್ರೀತಿ ಪಾತ್ರರ ಪುರವಣಿ.. ಅಂತ್ಯ ಪ್ರಾಸವೂ ಇದೆ...🍊
ಕಾಡುವ ಕನಸಿಗೂ
ಕೋರಿಕೆ ಕಳುಹಿಸಿರುವೆ
🍒ಕವಿಗಳಿಗೆ ಕನಸುಗಳಲ್ಲೂ ಕವಿತೆಗಳು ಕಾಡುವವು ಮತ್ತು ಆ ಕಾಡುವ ಕನಸಿಗೂ ಕೋರಿಕೆ ಕಳುಹಿಸುವರು...ವಾವ್ ಬ್ಯೂಟಿಫುಲ್...🍒
ನನ್ನ ಕನಸರಾಶಿ ನನಸಾಗಿ
ನೆನಪಲಿ ಮೈ ಮರೆಸು ಎಂದು ...
🍈ಕನಸು ರಾಶಿಯಾಗಿ ಬಿದ್ದಿದೆ ಕವಿಗೆ.. ಆಹಾ ಕಲ್ಪನೆಗೆ ಗರಿ ಮೂಡಿದೆ..ಆ ಕನಸಲಿ ಅವಳ ನೆನಪಲಿ ಮೈಮರೆಯಬೇಕಿದೆ, ಅದಕ್ಕಾಗಿ ಅವಳೇ ಕನಸಲ್ಲಿ ಬರಬೇಕಾಗಿದೆ..🍈
ನೊರೆ ಹಾಲಿನಂತಹ ಪ್ರೀತಿ
ವಿಷವಾಗಿ ಒಡೆಯಿತು
🍍ತೃತೀಯ ಚರಣದಲಿ ಕವಿಯು ಬೇಸರಗೊಳ್ಳುವರು. ಹಾಲು ವಿಷವಾಗಿ ಒಡೆದಿದೆ.. ಬೇಸರ ಮೂಡಿದೆ...ಜೀವನ ಮಂಕಾಗಿದೆ.ಪ್ರೀತಿ ಕುಂದಿದೆ...🍍
ಕಾರಣ ಅರಸಿ ಹೊರಟಿರುವೆ
ಸೋತು ಶರಣಾಗಿರುವೆ ...
🥒ಬೇಸರಕೆ ಕಾರಣ ತಿಳಿದಿಲ್ಲ ಪ್ರಿಯತಮಗೆ, ಕಾರಣವನರಸಿ ಹೊರಟಿಹನು...ಕಾರಣ ತಿಳಿಯದೆ ಸೋತು ಹೋಗಿಹನು. ಜೀವನದಿ ಖುಷಿಯಿಲ್ಲ ಈಗ...🥒
ಮದನಾರಿ ನಿನ್ನ ಮೋಹದ
ಬಲೆಯೊಳಗೆ ಮೈಮರೆತು
🍓 ಮೋಹದ ಬಲೆಯೊಳಗೆ ಬಿದ್ದು ನಲುಗಿ ಹೋಗಿಹನು ಕವಿ. ಬೇಸರದಿ ಗೀಚುತಿಹನು..ಮೋಹದ ಬಲೆಯೆಂಬ ರೂಪಕ ಮತ್ತೆ..ಕವನಕ್ಕೆ ಮುದಬಂದಿದೆ.🍓
ಮನಸ್ಸು ಮರುಳಾಯಿತು
ಕನಸ ಕೊಲೆಯಾಯಿತು
🥦ನಲ್ಲೆಗೆ ಮನಸು ಕೊಟ್ಟು ,ಕೆಟ್ಟು ಈಗ ಕಳೆದುಕೊಂಡ ಮನಸಿಗಾಗಿ ಪರಿತಪಿಸಿ ರಾಶಿ ಕನಸುಗಳ ಕೊಂದುಕೊಂಡಿಹನು ಕವಿ..ಬಾಳು ಬರಡಾಗಿ ಹೋಗಿಹುದು. ಕೊನೆಯಲ್ಲಿ ಪೂರ್ಣ ವಿರಾಮ ಇದ್ದಿದ್ದರೆ ಚೆನ್ನಾಗಿತ್ತು.🥦
ಆ ಕೆಂಪು ಸೂರ್ಯನಂತೆ
ಸುಡುತ್ತಿದೆ ನನ್ನ ಹೃದಯ
🌶ಕೆಂಪು ಸೂರ್ಯನಂತೆ ಎಂಬಲ್ಲಿ ಉಪಮೆಯ ಬಳಕೆ. ಅಲಂಕಾರಗಳನ್ನು ಅರೆದು ಕುಡಿದ ಗೀತೆಯಿದು.. ಭಾವನೆಗಳ ಮಹಾಪೂರ! ಸುಡುತಲಿದೆ ಕವಿಮನಸು.. ಆದರೆ
ಜಗದೋದ್ಧಾರಕ್ಕಾಗಿ ಅದು!🌶
ಉಸಿರು ಉಳಿಯಬೇಕಿದೆ..
ಸುರಿಸು ಬಾ ಒಲವ ಮಳೆಯಾ
🍅ಆದರೂ ನೊಂದರೂ, ಬೆಂದರೂ ಕವಿ ಅವಳಾಸೆ ಬಿಟ್ಟಿಲ್ಲ, ಇಂದಲ್ಲ ನಾಳೆ ಅವಳ ಬರುವಿಗೆ ತವಕದಿ ಕಾದಿಹನು. ಒಡೆದು ವಿಷವಾದ ಹಾಲನ್ನೂ ಸರಿಪಡಿಸುವ ಶಕ್ತಿ ಪ್ರೀತಿಗೆ ಮಾತ್ರ ಇದೆಯೇನೋ.. ಅದಕೆ ಕವಿಗೆ ಬದುಕಿನ ಆಸೆಯಿದೆ. ಅದಕೆ ಆಕೆ ಬಂದು ಒಲವ ಮಳೆ ಸುರಿಸಬೇಕಿದೆ..ಕವಿಭಾವ ಸೂಪರ್. ಇಲ್ಲೂ ಕೊನೆಗೆ ಭಾಷಾ ಚಿಹ್ನೆ ಬೇಕಿತ್ತೇನೋ...
ಅಂದದ ಭಾವನೆಹೊತ್ತ ಭಾವಗೀತೆ. ಫೆಂಟಾಸ್ಟಿಕ್.
🌹ರಮೇಶ್ 🌹
@ಪ್ರೇಮ್@