ಸೋಮವಾರ, ನವೆಂಬರ್ 19, 2018

600.ಭಾವಗೀತೆ-ಬದುಕ ರಥ

ಬದುಕ ರಥ

ಜಾರಿ ಹೋದ ಬದುಕೆ ನಿನ್ನಾ..
ನೆನಪು ಮಾತ್ರ ಶಾಶ್ವತ..
ಮನದ ಗೂಡಿನೊಳಗೆ ಅವಿತ
ಕನಸು ಇಹುದು ಸಂತತ..

ನಿರತ ನೀನು ನನ್ನ ಹೃದಯದಿ
ಕೆರೆವೆ ನಿರಂತರ ಪರಪರ..
ಮರೆತೆ ನನ್ನೆ ನಾನು ಹಲವೆಡೆ
ನೆನೆದು ನಿನ್ನ ಪರಿಸರ...

ಮನನ ಮಾಡುತ ಕಳೆದ ಸಮಯವು
ಹಾಡಿ ಕುಣಿದು ಹೋಯಿತು..
ನೀನು ಕೊಟ್ಟ ನಗೆಯ ಉಡುಗೊರೆ
ಮಾಸದೇನೇ ಉಳಿಯಿತು...

ಕಾಲ ದೇವನೆ ಬಾಳ ಪಥದಲಿ
ನೋವು ನಲಿವಿನ ಅಂತರ..
ಪ್ರೇಮ ದ್ವೇಷದ ನಡುವಿನಲ್ಲಿ
ನಮ್ಮ ಬದುಕಿನ ಹಂದರ..

ನಾವು ನಾನು ನೀವು ನೀನು
ಎನುತ ಎಳೆವೆವು ರಥವನು..
ಕೊನೆ ದಿನದಲಿ ಏನೂ ಇಲ್ಲವು
ದೇವ ಎಳೆವ ನಮ್ಮನು...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ