ಸೋಮವಾರ, ನವೆಂಬರ್ 12, 2018

587. ಕಾರ್ಗತ್ತಲೆಯ ಬದುಕು

ಕಾರ್ಗತ್ತಲೆಯ ಬದುಕು

ಮಳೆಯ ನಂಬಿ ಇಳೆಯ ಬಿತ್ತಿ
ಕಳೆಯ ಕಿತ್ತು, ಸೆಳೆಯ ಬಯಸಿ
ಪಕಳೆಯೊಳಗೆ ಬೆಳೆಯ ಪಡೆವ
ಹಳೆಯ ಕೃಷಿಯ ರೈತ  ನಾನು..

ಕೆಲಸವೆನ್ನ ದೇವರೆನುತ
ಕಲಬೆರಕೆಯ ನೆನೆಯದೆಯೆ
ಸಕಲವನ್ನು ಹಲವರಿಗರ್ಪಿಸಿ
ಮಲಮೂತ್ರದ ಗೊಬ್ಬರ ಹೊತ್ತು..

ಮರಗಿಡಗಳ ಬೆಳೆವ ಸಖನು,
ಇಳೆಯ ಪ್ರಿಯ ಮಿತ್ರ ನಾನು!
ತಲೆಯ ಕೆಡಿಸಿಕೊಂಡು ದುಡಿದು
ಬಡವನೆನಿಸಿ ಕತ್ತಲಾಗಿಸಿ ಬಾಳ..

ಹಳಬ ನಾನು ಭೂಮಿಗೆ
ಬೆಳೆವ ಸೂರ್ಯ ಹೊತ್ತಿಗೆ,
ಮರಳಿ ಬರಲು ಬೀಸೊ ಗಾಳಿ
ಬೆಳೆವುದು  ನೆಟ್ಟು ಬೆಳೆಸಿದ ಬಳ್ಳಿ..

ಸಲುಗೆಯಿಹುದು ಬುವಿಯೊಡನೆ
ಬಳಲಿ ಹೋದೆ ತೋಟದೊಡನೆ
ಕನಲಿ ಹೋದೆ ಮಳೆಗೆ ಕಾದು
ಬೆಳೆಯ ಬೆಳೆಯೊ ಭಯದ ಬದುಕು.
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ