ಗುರುವಾರ, ನವೆಂಬರ್ 1, 2018

561. ನ್ಯಾನೋ ಕತೆ-ಮಗಳು

ಮಗಳು

ಪಾರ್ಶ್ವ ವಾಯುವಿಗೆ ಸಿಕ್ಕು ಒಂದು ಬದಿ ಪ್ರಜ್ಞೆ ಕಳೆದುಕೊಂಡಾಗ ಆಸ್ಪತ್ರೆಗೆ ಹೋಗಿ ಅಡ್ಮಿಟ್ ಆಗಿದ್ದರು ಚಂದ್ರಣ್ಣ. ಡಾ.ಕೃತಿ ಅವರ ಪ್ರೀತಿಯ ಮಾತುಗಳು ಅಕ್ಕರೆಯ ಚಿಕಿತ್ಸೆ ಅವರನ್ನು ಎರಡೇ ವಾರಗಳಲ್ಲಿ ಗುಣಪಡಿಸಿತ್ತು.
        ****
      ಮಗನೇ ಬೇಕೆಂದು ಭ್ರೂಣಹತ್ಯೆಗೆ ಹೊರಟಿದ್ದರು ಚಂದ್ರಣ್ಣ ಹಾಗೂ ಗಿರಿಜಕ್ಕ. ಡಾಕ್ಟರ್ ಭವ್ಯ ತಕ್ಷಣ ಜಾಗೃತರಾಗಿ "ಹಾಗೆ ಮಾಡಿದರೆ ತಾಯಿಗೆ ಅಪಾಯವಿದೆ. ಮಗು ಬೇಡವೆಂದರೆ ಯಾರಿಗಾದರೂ ಮಕ್ಕಳಿಲ್ಲದವರಿಗೆ ದತ್ತು ನೀಡಿ" ಎಂದರು. ಹೆರಿಗೆಯಾದ ಬಳಿಕ ಹೆಣ್ಣೆಂದು ಗೊತ್ತಾಗಿ ಪತ್ನಿಗೆ ಅರಿವು ಬರುವ ಮುಂಚೆಯೇ ಮಗುವಿನ ಮುಖವನ್ನೂ ನೋಡದೆ ದತ್ತು ಕೊಟ್ಟಾಗಿತ್ತು. ತಾಯಿಯ ಸಂಕಟಕ್ಕೆ ಬೆಲೆ ಇರಲಿಲ್ಲ.
       *****
   ಮನೆಗೆ ಹೊರಟು ನಿಂತಾಗ ಡಾ. ಭವ್ಯ ಚಂದ್ರಣ್ಣನನ್ನು ಕರೆದು ಪರಿಚಯಿಸಿದರು. "ನೀವಂದು ಬೇಡವೆಂದು ಬಿಟ್ಟುಹೋದ ಮಗುವೇ ನಿಮ್ಮನ್ನು ಇಂದು ಬದುಕಿಸಿದ್ದು". ಚಂದ್ರಣ್ಣನ ಕಣ್ಣು ತುಂಬಿದ್ದು ಯಾರ ಗಮನಕ್ಕೂ ಬರಲಿಲ್ಲ!
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ