ಮಂಗಳವಾರ, ನವೆಂಬರ್ 13, 2018

591. ಮಕ್ಕಳು

ಮಕ್ಕಳೊಂದಿಗಿನ ಕ್ಷಣಗಳು

ಅನುದಿನ ಅನುಕ್ಷಣ
ಮಕ್ಕಳ ಜೊತೆಗೆ..
ಪ್ರತಿದಿನ ಪ್ರತಿಕ್ಷಣ
ಕುಡಿಗಳ ಕಡೆಗೆ..

ಒಂದೊಂದು ನಿಮಿಷವು
ಕಲಿಕೆಯ ಕಡೆಗೆ...
ಆಟದ ಜೊತೆಗೆ
ಪಾಠದ ನಡಿಗೆ...

ಮನವೂ ಅಪ್ಪಟ
ದೇವರ ಹಾಗೆ..
ಕೆಲಸವೂ ಉತ್ತಮ
ಮನಸಿನ ಜೊತೆಗೆ..

ವಿದ್ಯೆಯು ಬೇಕು
ಬುದ್ಧಿಯೂ ಬೇಕು..
ಹೃದಯದಿ ಆನಂದ
ಜೊತೆಗಿರ ಬೇಕು..

ಇದ್ದರೆ ಇರಬೇಕು
ಮಕ್ಕಳ ಹಾಗೆ..
ಮನದಲಿ ಮತ್ಸರ
ಇಲ್ಲದ ಹಾಗೆ..

ಹಂಚಿ ತಿನ್ನುವ
ಬಗೆಯದು ಹೀಗೆ..
ನಾವೆಲ್ಲರೂ ಒಂದೇ
ಎನ್ನುವ ಹಾಗೆ..

ಆ ಜಾತಿ ಈ ಜಾತಿ
ಎನ್ನುವ ಹಿರಿಯರೇ
ಕಲಿಯಿರಿ ಮಕ್ಕಳ
ಪ್ರೀತಿಯ ಉಡುಗೊರೆ..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ