ಸತ್ತವರು ಸಾಯಲಿ ಬದುಕಬೇಕು ನಾವು, ಮರೆತುಬಿಡು ಜಗವ
ಕುದಿವವರು ಕುದಿಯಲಿ ಬಾಳಬೇಕು ಗೆದ್ದು ಸಾವು, ಮರೆತುಬಿಡು ಜಗವ..
ಅಬಲೆಯೆನಬೇಡ ನಿನ್ನ, ನೀನೂ ಸಬಲೆ
ಬಲಶಾಲಿಗಳ ಜೊತೆ ಹೋರಾಡಿ ಬದುಕಬೇಕು ಇಡುತ ಕಾವು, ಮರೆತುಬಿಡು ಜಗವ...
ಮನದ ನೋವುಗಳೆಲ್ಲ ಮನದೊಳಗೇ ಇರಲಿ..
ಮರೆತು ಬದುಕಬೇಕು ತನ್ನೊಳಗಿನ ನೋವು, ಮರೆತುಬಿಡು ಜಗವ..
ಭೂಮಿಗೆ ಸೂರ್ಯನಿರುವಂತೆ ಹಣೆಗೆ ಸಿಂಧೂರವು
ಹೆಣ್ಣಿರುವುದು ತಿನ್ನಲಿಕ್ಕಲ್ಲ ಮಾವು, ಮರೆತುಬಿಡು ಜಗವ..
ತೋರಿಸು ಶಕ್ತಿಯ, ನಡೆ ನೀತಿ ಮಾರ್ಗದಿ,
ಸಾಧಿಸು ಛಲದಿ, ಮಾಡಿದಂತೆ ಪಲಾವು, ಮರೆತುಬಿಡು ಜಗವ...
ಆಡುವವರು ಏನಾದರೂ ಆಡಿಕೊಳ್ಳಲಿ,
ನಾಲಿಗೆಗಿಲ್ಲ ಮೂಳೆ, ಬೆಳೆ ಪ್ರತಿ ಮುಂಜಾವು, ಮರೆತುಬಿಡು ಜಗವ...
ಸಾಧಿಸಲೆಂದೇ ಧರೆಗೆ ಬಂದಿಹೆವು ನಾವು
ಪೂರೈಸಬೇಕು ಪ್ರೇಮದಿ ನಮ್ಮ ಕಾರ್ಯವು, ಮರೆತುಬಿಡು ಜಗವ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ