ಸೋಮವಾರ, ನವೆಂಬರ್ 12, 2018

590. ಕವನ-ಬಯಲು ನಾನು

ಬಯಲು ನಾನು

ಬಯಲು ನಾನು ಮಲ ಮೂತ್ರವ
ಸುರಿಯಲೆಂದು ಹಾಯಾಗಿ ಬಿದ್ದಿರುವೆ.
ನಿನ್ನ ಕಸವ ನನ್ನ ಎದೆಯ ಮೇಲೆ
ಹರಡಿಕೊಳ್ಳಲೆಂದೇ ಇಲ್ಲಿ ನಾನಿರುವೆ..

ಬಯಲ ಆಲಯವು ಎನುವರೆನ್ನ ಜನ
ಪ್ಲಾಸ್ಟಿಕ್, ಮುರಿದ, ತುಂಡಾದ,ಹಾಳಾದ
ದಿನ ಮುಗಿದ, ಸಮಯ ಕಳೆದ
ಬಳಸಲಾಗದ, ಬಳಸಿಹಾಳಾದವೆನ್ನೆಡೆಗೆ..

ನಾನೆಂದರೆ ಎಲ್ಲರೊಳಗೆ ಬರಿಯ ಕೀಳಾದಂತೆ
ಎಸೆಯುವಿರಿ ನನ್ನೆಡೆಗೆ ಕಸಕಡ್ಡಿ ಕಸವನೆಲ್ಲ !
ಒಂದು ಚೂರೂ ಇಲ್ಲದಂತೆ ಕಾಳಜಿಯು,
ಬೇಸರವಾಗದೆ ನನಗೂ ವಾಸನೆಯ ಹೀರಿ?

ಮಲಗ ಬಿಡಿರೆನ್ನನು ನನ್ನಷ್ಟಕೇ  ಹಾಗೆ ಸುಮ್ಮನೆ
ನೀವೇಕೆ ತುರುಕುವಿರಿ ನಿಮ್ಮ ಎಲ್ಲ ಬೇಡದ  ಕಸವ?
ಮಕ್ಕಳಿಗೂ ಕಲಿಸಿರಿ ನನ್ನನ್ನು ಅಂದವಾಗಿ ಇರಿಸಲು,
ಇರಿಸಲಾರಿರೆ ನನ್ನನು ನಿಮ್ಮ ಕುಡಿಗಳಿಗೆ ನೆಮ್ಮದಿಯ ಆಟವಾಡಲು..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ