ತುಳಸಿ
ವಿಷ್ಣು ಪತ್ನಿಯೇ ತುಳಸಿ ಮಾತೆಯೇ
ಪೂಜೆಯು ನಿನಗೆ ಮಹಿಳೆಯ ಕರದಲಿ
ಮನದಲಿ ಶಾಂತಿ ವದನದಿ ನಗುವು
ಇರಲಿ ಹೃದಯವು ಸ್ವಚ್ಛದಿ, ಆರೋಗ್ಯದಿ...
ಉತ್ತಮ ಆಹಾರ ಮನೆಯಲೆ ಆಗಲಿ
ಬೇಕರಿ ಊಟವು ಕಡಿಮೆಯೆ ಆಗಲಿ
ಎಣ್ಣೆಯ ಅಂಶವು ಏರದೆ ಇರಲಿ..
ಉಪ್ಪು ಹುಳಿ ಕಾರ ಹದವಾಗಿರಲಿ...
ಹಬ್ಬದ ಸಡಗರ ತುಂಬಾ ಇರಲಿ
ಅಮ್ಮನ ಕೈರುಚಿ ಸವಿಯನು ನೀಡಲಿ
ಮನೆ ಮನ ದೀಪದಿ ಬೆಳಗುತಲಿರಲಿ..
ತುಳಸಿಯು ನೋಡಿ ಆನಂದದಿ ಹರಸಲಿ..
ಗಿಡ ನೆಡೊ ಬುದ್ಧಿಯು ಬರಲಿ
ತುಳಸಿ ಮನೆಮನೆಯಲಿ ರಾರಾಜಿಸಲಿ
ಆಮ್ಲಜನಕವು ಎಲ್ಲೆಡೆ ಹೆಚ್ಚಲಿ..
ತುಳಸಿ ಹಬ್ಬವು ದಿನಾಲೂ ಇರಲಿ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ