ಸೋಮವಾರ, ನವೆಂಬರ್ 12, 2018

586.ಗಝಲ್ -47

ಗಝಲ್


ನಿನ್ನಿರವು ಆನಂದ, ನೀ ಬಂದು ಬಾಳಬೆಳಗಿದೆ ಗೆಳತಿ
ನೀನೆನ್ನ ಮಡಿಲಲಿ ಜಿಗಿದು ನನ್ನ ರಕ್ಷಿಸಿದೆ ಗೆಳತಿ..

ಹಸಿರು ಹೊದ್ದ ನನ್ನ ಸೀರೆ ಮಾಸಿಹೋಗಿತ್ತು
ನೀ ನೀರುಣಿಸಿ ಪಚ್ಚೆಯ ತಂದೆ ಗೆಳತಿ..

ಗಿಡ ಬಳ್ಳಿ ಹೂ ಮರ ಮುರುಟಿ ಹೋಗಿತ್ತು,
ಊಟವ ಹಾಕಿ ಕಾವು ನೀಡಿದೆ ಗೆಳತಿ!

ಕಾಯಿ ಬಿರಿದು ಹಣ್ಣಾಗಿ ನೇತಾಡುತಲಿತ್ತು,
ಬೀಜ ತೆಗೆದು ಮಣ್ಣಲಿ ಬಿತ್ತಿಬಿಟ್ಟೆ ಗೆಳತಿ..

ಸೂರ್ಯ ಕಿರಣ ತಾಗದೇ ಮುದುಡಿ ಕುಳಿತಿದ್ದೆ
ಬಲೆಯ ಸರಿಸಿ ಜೀವಜಂತುಗಳ ರಕ್ಷಣೆ ಮಾಡಿದೆ ಗೆಳತಿ..

ಧೂಳು ಹಿಡಿದ ಮರಕೆ ಉಸಿರುಕಟ್ಟಿತ್ತು!
ಮೋಡದಿಂದ ಉದುರಿಬಂದು ಬದುಕ ನೀಡಿದೆ ಗೆಳತಿ..

ಬಾಯಾರಿ ಜೀವ ಭಯದಿ ಹೂಂಕರಿಸಿದ್ದೆ..
ಬಿರುಕಿನೊಳಗೆ ಪ್ರೇಮದಿಂದ ನೀರ ಕುಡಿಸಿದೆ ಗೆಳತಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ