ಬುಧವಾರ, ನವೆಂಬರ್ 28, 2018

620. ದೇವರೂ ಕಲೆಗಾರ

ದೇವರೂ ಕಲೆಗಾರ

ದೇವರೂ ಕುಂಚ ಹಿಡಿದ ಚಿತ್ರಗಾರ
ಗೆರೆಗಳಲಿ ಕಲೆ ಅರಳಿಸುತಲಿ
ಬಣ್ಣ ತುಂಬೋ ಕಲೆಗಾರ..
ತನ್ನ ಗೆರೆಗಳ ನಡುವಿನಲಿ
ತುಂಬಿಹನು ಬಣ್ಣಗಳನು
ಗಂಡು ನವಿಲಿನ ಗರಿಗಳಲಿ,
ಮರದ ತುದಿಯ ಎಲೆಗಳಲಿ..
ಸೂರ್ಯ ಉದಯಿಸೊ ಹೊತ್ತಿನಲಿ..
ಮಾತು ಮರೆಸೋ ಮೌನದಲಿ..
ಗಿಡದ ಹೂವಿನ ದಳಗಳಲಿ..
ಮರದ ಎಲೆಗಳ ನೆರಳಿನಲಿ..
ಹರಿವ ನೀರಿನ ರಭಸದಲಿ
ನಲಿವ ಕಡಲ ತೆರೆಗಳಲಿ..
ಹಾರಿ ಕುಣಿವ ಮೊಲಗಳಲಿ..
ನೆಗೆಯುತಿರುವ ಜಿಂಕೆಯಲಿ..
ತಳುಕಿ ಬಳುಕುವ ಹೆಣ್ಣಿನಲಿ..
ನೋಟ ನೋಡುವ ಕಣ್ಣಿನಲಿ..
ವನದ ಮೂಲೆಯ ಪೊದರಿನಲಿ..
ಹಸಿರು ಗಿರಿಯ ಶಿಖರದಲಿ..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ