ಇವನೇ ಮಾನವ
ಹಾಸ್ಯ ಲಾಸ್ಯಗಳ ಭಾಷ್ಯ ಬರೆದವನೆ
ಕಾರ್ಯ ಶೌರ್ಯವ ಹೊಂದಿ ಮೆರೆದವನೆ...
ಭೂತ ಭವಿಷ್ಯವ ಓದಿ ತಿಳಿದವನೆ
ನಾಟ್ಯ ನೃತ್ಯಗಳ ಕಲಿತು ಮಾಡುವನೆ..
ವೈದ್ಯಕೀಯ ತಂತ್ರಜ್ಞಾನವ ಮುಂದುವರೆಸುತಿಹ
ಆಟ ಪಾಠವ ಜೊತೆಗೆ ಆಡಿ ಕಲಿಯುತಿಹ
ಮಾಟ ಮಂತ್ರದಲು ಹಿಂದೆ ಬೀಳದಿಹ
ತಾತ ಮುತ್ತಾತರಿಂದ ಬದುಕು ಕಲಿಯುತಿಹ
ವೈಶ್ಯ ಬ್ರಾಹ್ಮಣ ಕ್ಷತ್ರಿಯ ಶೂದ್ರನೆನುವ
ಜಾತಿ ಧರ್ಮವೆಂದು ಹೊಡೆದಾಡುತಿಹ
ತಮ್ಮ ತಮೊಳಗೆ ಕಿತ್ತಾಡುತಿಹ
ಹೆಣ್ಣು-ಹೊನ್ನು-ಮಣ್ಣಿಗೆ ಬಡಿದಾಡುತಿಹ
ನಾಡಿ ಹೃದಯ ಬಡಿತದಿ ಬದುಕುವ
ಮೋಡಿ ಮಾಡಿ ಜನರನು ಗೆಲ್ಲುವ
ಬಲಿಷ್ಠ ಪ್ರಾಣಿಯನೂ ಪಳಗಿಸುವ
ಮೆದುಳ ಶಕ್ತಿಯಲಿ ಕಾರ್ಯವೆಸಗುವ
ಮರೆತು ಮರೆಯನು ತನ್ನ ಕಾರ್ಯವ
ಒಳ್ಳೆ ಕೆಟ್ಟ ಗುಣಗಳ ಹೊಂದಿರುವವ
ಬಂಧು ಬಳಗ ಸ್ನೇಹಿತರ ಬಿಡದವ
ಅವನೇ ಜಗದ ಬುದ್ಧಿವಂತ ಮಾನವ.
@ಪ್ರೇಮ್@
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ