ಬಾಳು ಬೆಳಗಲಿ
ಬಾನಿನ ನಿಶೆಗೆ ಚಂದಿರ ಕಿರೀಟ
ಬಾಳಿನ ಬೆಳಕಿಗೆ ಗುಣವು ಮುಕುಟ..
ವೇಷದ ಬದುಕಿಗೆ ಕ್ಷಣ ಕ್ಷಣ ಇಹುದು
ವ್ಯರ್ಥವ ಮಾಡದೆ ಕಳೆವವ ಜಾಣ,
ವ್ಯತ್ಯಯವಾಗದೆ ಇರದು ಎಂದಾದರೂ
ಬಾಳನು ಹಸನು ಮಾಡಲು ಪಣತೊಡು...
ಮಂದಿಗೆ ಸರಿಯಾಗಿ ಬಾಳಲು ಆಗದು
ಮುಂದಿನ ದಾರಿಯು ಸವೆಸಲು ಸಾಗು
ಕಂದೀಲಿನ ಬೆಳಕೆಲ್ಲಾ ಕಡೆ ಸಿಗದು
ಕುಂದದೆ ಬಾಳಿನ ಬೆಳಕನು ಪಡೆವುದು..
ಭಯದಲಿ ಬಾಳುವೆ ಸಾರ್ಥಕವಲ್ಲವು
ಸಾಧನೆ ಇಲ್ಲದೆ ಬದುಕೇ ವ್ಯರ್ಥವು..
ವಿದ್ಯೆ ವಿನಯ ವಿನೂತನ ಜೊತೆಯಲಿ
ವಿಧವಿಧ ತಂತ್ರದಿ ದಿನಗಳು ಸಾಗಲಿ..
ಯೋಚನೆ ಉತ್ತಮ ದಿಕ್ಕಲಿ ಬರಲಿ
ಮಾತಿನ ಹಿಡಿತವು ನಾಲಗೆಗಿರಲಿ..
ಜ್ಯೋತಿಯ ಕಿರಣವು ಬೆಳಗಿ ಬರಲಿ
ಪ್ರೀತಿಯ ವದನವು ಬೆಳಕನು ಚೆಲ್ಲಲಿ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ