ನುಡಿದಂತೆ ನಡೆ
ಮಾತೆ ಮಿತ್ರ, ಮಾತೆ ಮೃತ್ಯು
ಮಾತೆ ಮಿಥ್ಯ, ಮಾತೆ ಸತ್ಯ...
ಮಾತೆ ಮುತ್ತು, ಮಾತೆ ಮಾಣಿಕ್ಯ!
ಮಾತಿನಿಂದ ಮುತ್ತಾಗು ಮಾತನಾಡುತ...
ವಚನವೀಯುವಾಗ ಪಚನವಾಗುವಂತೆ ಇರಲಿ
ಪರಚಿಕೊಳ್ಳುವಂಥ ವಚನ ಬಾರದಿರಲಿ..
ನಾಚದೆಯೇ ಬದುಕುವಂಥ ಪದಗಳಿರಲಿ
ವಾಚನಕೆ ಯೋಗ್ಯವಾದ ಬರಹವಿರಲಿ..
ಮನದ ಮಾತು ಹರಿಯುತಿರಲಿ
ಒಳಗೆ ಹೊರಗೆ ಒಂದೇ ಇರಲಿ
ತಿವಿಯುವಂತೆ ಹೊರ ಬರದಿರಲಿ
ಶಾಂತಿ ಸಹನೆ ಉಕ್ಕುತಿರಲಿ..
ಬೇಸರಕ್ಕೆ ಸಾಂತ್ವನ ಬೇಕಾಗಿದೆ
ನೇಸರನಿಗೆ ಅಗಾಧ ಶಕ್ತಿ ಇದೆ
ಏನೆ ಇರಲಿ ಏನೆ ಇರಲಿ ಇರಬೇಕಿದೆ
ಹಿಡಿತ ನಮ್ಮ ನಾಲಗೆಯ ವೇಗಕ್ಕೆ ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ