ಬಂತು ದೀಪಾವಳಿ
ಬಂತಪ್ಪ ಬಂತೋ ದೀಪದ ಹಬ್ಬ
ದೀಪಾವಳಿಯು ಸಡಗರದ ಹಬ್ಬ
ಪಟಾಕಿ ಒಡೆದು ದೀಪವ ಉರಿಸಿ
ಬೆಳಕನು ಬೀರೋ ಬಿರುಸಿನ ಹಬ್ಬ!//೧//
ಬಲಿಯೇಂದ್ರನನ್ನು ಕರೆಯಲು ಹೋಗಿ
ಒಳ್ಳೇದು ಮಾಡು ಎನ್ನುತ ಕೂಗಿ
ಗದ್ದೆಗೆ ಕೇದಿಗೆ ಗಿಡವನು ನೆಟ್ಟು
ಆಯುಧಕೂ ಪೂಜೆಯ ಮಾಡಿ ಇಟ್ಟು//೨//
ನೆಂಟರು ಇಷ್ಟರು ಎಲ್ಲರು ಬರುವರು
ಹಿರಿಯರಿಗೂ ಬಡಿಸಿ ಊಟವ ಕೊಡುವರು
ದೋಸೆ, ಅವಲಕ್ಕಿ ಒಟ್ಟಿಗೆ ಸವಿವರು
ಮನದ ಕತ್ತಲೆಯ ಓಡಿಸಿ ಬಿಡುವರು//೩//
ಪಟಾಕಿ ಶಬ್ದಕ್ಕೆ ಕೇಕೆಯ ಹಾಕಿ
ಬೆಳಕಿನ ಬಳ್ಳಿಗೆ ಸಂತಸ ಹಾಸಿ
ಮನೆಮಂದಿಯೆಲ್ಲ ಎಣ್ಣೇಲಿ ಮಿಂದು
ನರಕಾಸುರನ ನಾಡಿಗೆ ಕರೆದು//೪//
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ