ದುರಾಸೆಯ ವರ
ಗಂಗೆ ಗೋಗರೆಯುವುದು ನಿಂತಿದೆ
ಗಗನ ಕುಟಿರದ ಅಂಗಳದ ಮೇಘಶಿಖರದಿ
ಬರಿದಾಗಿ ಕುಡಿನೀರಿನ ಅಮೃತ
ಭೂಮಿ ತಾಯಿಯ ಎದೆಯು ಒಣಗಿದೆ
ನೆಲವೆಲ್ಲ ಕಾದು ಕಲ್ಲಾಗಿದೆ
ನೀರಿಲ್ಲದೆ ಭೂಮಿ ತತ್ತರಿಸಿ ಬರಡಾಗಿದೆ
ಹನಿಹನಿಗೆ ಕೊರಗಿ ಪಾಡಾಗಿದೆ
ಊರೆಲ್ಲ ತೊರೆದು ಗುಂಪು ಗುಳೆ ಹೋಗಿದೆ
...ವಿದ್ಯಾಧರ ದುರ್ಗೆಕರ
08.11.2018
ದುರಾಸೆಯ ವರ
ಗಂಗೆ ಗೋಗರೆಯುವುದು ನಿಂತಿದೆ
ಹೌದು ಸರ್ ಖಂಡಿತ, ಕಳೆದ ಏಪ್ರಿಲ್ ನಲ್ಲಿ ಗಂಗೆಯ ನಿಜ ದರ್ಶನವಾದಾಗ ಹಾಗೆಯೇ ಅನ್ನಿಸಿತು...ಸಕಾಲಿಕ ವಾಕ್ಯ...
💐💐💐💐💐
ಗಗನ ಕುಟಿರದ ಅಂಗಳದ ಮೇಘಶಿಖರದಿ
ಕುಟೀರ ಆಗಬೇಕಿತ್ತೇನೋ... ಅಬ್ಬಾ.. ನಿಮ್ಮ ರೂಪಕಕ್ಕೆ ಮನಸೋತೆ...ಸುಂದರ...ಗಗನ ಕುಟೀರ...ಅಂಗಳದ ಮೇಘಶಿಖರ... ಕವಿ ಹೃದಯಕ್ಕೊಂದು ಸಲಾಂ...
💐💐💐💐💐💐
ಬರಿದಾಗಿ ಕುಡಿನೀರಿನ ಅಮೃತ
ಬರಿದಾಗಿದೆ...ಹೌದು, ಎಷ್ಟೇ ಮಳೆ ಬಂದರೂ ಕುಡಿಯಲು ಶುದ್ಧ ನೀರಿಲ್ಲ...ಅನುಭವದ ನುಡಿ..
💐💐💐💐💐💐
ಭೂಮಿ ತಾಯಿಯ ಎದೆಯು ಒಣಗಿದೆ
ವಾವ್...ಖಂಡಿತ ರೂಪಕಯುತ ಸಾಲು ಅತ್ಯದ್ಭುತವಾಗಿ ಮೂಡಿ ಬಂದಿದೆ...ತಾಯೆದೆ ಒಣಗಿದೆ, ಮನುಜರಿಂದಾಗಿ ವಿಷಪೂರಿತವೂ ಆಗಿದೆ,ಬರಡೂ ಆಗಿದೆ, ಗಿಡ ಮರ ಕಡಿದು ಒಣಗಿ ಹೋಗಿದೆ...
💐💐💐💐💐💐💐💐💐
ನೆಲವೆಲ್ಲ ಕಾದು ಕಲ್ಲಾಗಿದೆ
ನೆಲವೆಲ್ಲ ಕಾದು ಕಲ್ಲಿನಂತಾಗಿದೆ ಎಂದಿದ್ದರೆ ಉಪಮೆಯಾಗಿರುತಲಿತ್ತು. ಆದರೆ ಈ ಹನಿಗವನದಲ್ಲಿ ನೀವು ಪ್ರತಿ ಸಾಲಿನಲ್ಲೂ ರೂಪಕ ಸಾಮ್ರಾಜ್ಯದ ಚಕ್ರವರ್ತಿ... ಬಿಟ್ಟು ಕೊಡಲಾರಿರಿ ಅದನ್ನು.. ಅದು ನಿಜ ಕವಿಗಳ ಲಕ್ಷಣ..ಆಹಾ...
💐💐💐💐💐💐💐
ನೀರಿಲ್ಲದೆ ಭೂಮಿ ತತ್ತರಿಸಿ ಬರಡಾಗಿದೆ
ಇಲ್ಲೊಂದು ಪೂರ್ಣ ವಿರಾಮ ಬೇಕಿತ್ತೇನೋ... ಹೌದು..ವಸ್ತುಸ್ಥಿತಿ ಯಥಾವತ್ತಾಗಿ ಬಿಂಬಿತವಾಗಿದೆ..ಒತ್ತಕ್ಷರ ಕವನಕ್ಕೆ ಕಿಕ್ಕು ನೀಡಿದೆ...
💐💐💐💐💐💐💐💐💐
ಹನಿಹನಿಗೆ ಕೊರಗಿ ಪಾಡಾಗಿದೆ
ಇನ್ನು ಸ್ವಲ್ಪ ದಿನದಲ್ಲಿ ನಮ್ಮ ಪಾಡೂ ಅದೇ ಆಗಲಿದೆ.. ಗಾಳಿ, ನೀರಿಗಾಗಿ ಅಂಗಡಿ ಅಂಗಡಿಯಲ್ಲಿ ಅಳೆಯುವ ದಿನ ದೂರವಿಲ್ಲ, ಭವಿಷ್ಯ ಹನಿಗವನದ ಸಾಲಾಗಿ ಮೂಡಿಬಂದಿದೆ..
💐💐💐💐💐💐💐
ಊರೆಲ್ಲ ತೊರೆದು ಗುಂಪು ಗುಳೆ ಹೋಗಿದೆ
ಇಲ್ಲೂ ಒಂದು ಪೂರ್ಣತೆಗಾಗಿ ಪೂರ್ಣ ವಿರಾಮ ಇದ್ದಿದ್ದರೆ ಚೆನ್ನಾಗಿತ್ತು ಗುರುಗಳೇ... ಶಿಕ್ಷಕರಾದ ಕಾರಣ ಸರಿಗಿಂತ ಹೆಚ್ಚಾಗಿ ತಪ್ಪು ಹುಡುಕುತ್ತೇವೆ, ತಿದ್ದಿಕೊಳ್ಳಲಿ ಎಂದು... ನಿಮ್ಮನ್ನು ತಿದ್ದುವಷ್ಟು ಕಲಿತಿಲ್ಲ...ಕವಿಭಾವಕ್ಕೆ ದಕ್ಕೆಯಾಗಿದ್ದಲ್ಲಿ ತಲೆಗೊಂದು ಮೊಟಕಿ ಕ್ಷಮಿಸಿ ಬಿಡಿ..
ಇಷ್ಟೆಲ್ಲಾ ನೀರಿಗಾಗಿ ಕಷ್ಟ ಪಟ್ಟ ಮೇಲೆ ಅದೇ ಊರಿನಲ್ಲಿ ಬದುಕಲು ಸಾಧ್ಯವೇ.. ಜೀವಿಗಳು, ಮಾನವ ಗುಳೇ ಹೋಗಬಹುದು ...ಪಾಪ ಭೂಮಿ ತಾಯಿಯ ಪಾಡೇನು? ಸೂರ್ಯ ಆಕೆಯನ್ನು ಸುಡುವುದಿಲ್ಲವೇ..
💐💐💐💐💐
ದಯವಿಟ್ಟು ಇದನ್ನು ಮುಂದುವರೆಸಿ.. ಕವಿತೆಗೆ ಇನ್ನಷ್ಟು ಸಾಲುಗಳು ಸೇರಲಿ.. ನನ್ನ ಕೊನೆಯ ಪ್ರಶ್ನೆಗೆ ಉತ್ತರ ಸಿಗಲಿ.. ಹನಿಗವನ ಎರಡಾಗಲಿ, ಅಥವಾ ಕವನವಾಗಿಯೋ, ಭಾವಗೀತೆಯಾಗಿಯೋ ಮೂಡಿಬರಲಿ.. ರೂಪಕ ಮುಂದುವರೆಯಲಿ..
💐💐💐💐💐💐
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ