ಗಝಲ್
ಎದ್ದ ಕೂಡಲೇ ಓಡಿ ಬರುವೆನಲ್ಲ ನಿನ್ನ ಬಳಿಗೆ
ನನ್ನೆಲ್ಲಾ ಕಿರಣಗಳ ಮಳೆ ಸುರಿಸುವೆನಲ್ಲ ನಿನ್ನ ಬಳಿಗೆ..
ಗ್ರಹಗಳಿಹವು ಹಲವಾರು ಸುತ್ತುತ್ತಾ ನನ್ನ ಸುತ್ತ
ಎಲ್ಲ ಜೀವಿಗಳ ಬಿಟ್ಟಿರುವೆನಲ್ಲ ನಿನ್ನ ಬಳಿಗೆ..
ನಾ ಕಾಯುತ್ತಾ ಕೆಂಡವಾಗುವೆ ಪ್ರತಿದಿನ
ಪ್ರತಿಕ್ಷಣ ಬಂದು ಕಾಯುತಿಹೆನಲ್ಲ ನಿನ್ನ ಬಳಿಗೆ..
ಮೂರನೆಯವಳಾಗಿ ಸುತ್ತುತಿರುವೆ ನೀ ನನ್ನ
ಮೊದಲನೆಯವಳಂತೆ ಬಂದು ಕಾಣುತಿರುವೆನಲ್ಲ ನಿನ್ನ ಬಳಿಗೆ..
ನನ್ನ ಪ್ರೀತಿಯನೆಲ್ಲ ನಿನಗೆರೆದಿರುವೆ
ಪ್ರೇಮದಿ ಪ್ರತಿ ಬೆಳಗ್ಗೆ ಬರುತಿರುವೆನಲ್ಲ ನಿನ್ನ ಬಳಿಗೆ..?
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ