ಶನಿವಾರ, ನವೆಂಬರ್ 17, 2018

596. ಜಾತಿ

ಜಾತಿ ಮನ

ಮುಸುಕಾಗಿದೆ  ಮನದ ಕದವು
ಜಾತೀಯತೆಯ ಗೀಳಿನ ಚಿಪ್ಪಿನೊಳಗಡೆ
ಬರುವೆ ಹೊರಗೆಂದರೂ ಅದು ಬರಲು ಬಿಡದು
ಶಾಲೆಗೆ ಸೇರಲೂ, ಕೆಲಸಕ್ಕೂ ಅದು ಬೇಕಲ್ಲವೇ...

ಪ್ರಮಾಣ ಪತ್ರಕ್ಕಿಹುದು ಹಲವು ಬೆಲೆ
ಆಯಾ ಜಾತಿಗೆ ಅದರದೇ ಆದ ಮೀಸಲು
ಕೆಳ ಜಾತಿ ಮೇಲ್ಜಾತಿಯೆಂಬ ಗೋಜಲು..
ಕೇಳ ಬಾರದಂತೆ ಹುಟ್ಟಿದ ಜಾತಿಯನು..

ಕೇಳುವರೇಕೆ ಪ್ರಮಾಣ ಪತ್ರದ ಜಾತಿಯನು..?
ಪತ್ರವಿದ್ದರೆ ಮಾತ್ರ ಮೀಸಲಾತಿಯಂತೆ
ಇಲ್ಲದಿರೆ ದಪ್ಪಟ್ಟು ಫೀಸು ತೆರಬೇಕಂತೆ..

ಮೀಸಲಾತಿ ಬುದ್ಧಿಗಲ್ಲ, ಜಾತಿಗೆ ಎನುವರು..
ದೇವರು ಹುಟ್ಟುವಾಗಲೇ ಜಾತಿ ನೋಡಿ ಬುದ್ಧಿ ಕೊಟ್ಟಿಹನೇ..
ಜಾತಿ -ಜಾತಿಯೆನಬೇಡಿರೋ ನೀತಿ ಕಲಿಯಿರೋ..

ನೀತಿ-ನಿಯತ್ತಿಲ್ಲದವ ಯಾವ ಜಾತಿಯಾದರೂ ಫಲವಿಲ್ಲ..
ಮಾನವ ಜಾತಿಯಿಂ ತಾನೊಂದೆ ಒಲಂ..
ಮಾನವ ಮಾನವ ಜಾತಿಯಲಿ ಬದುಕಿದರೊಳಿತು..
ಸತ್ಯ, ನಿಷ್ಠೆಯ ಬೆಳೆಸಿಕೊಂಡರಾಯಿತು..

ಪರೋಪಕಾರಿಯೇ ಮೇಲ್ಜಾತಿಯವ..
ಇತರರಿಗೆ ಉಪದ್ರ ಮಾಡುವವನೇ ಕೀಲ್ಜಾತಿಯವನು...
ನಿಜ ಹೇಳುವವ ಉಚ್ಚಜಾತಿಯವನು..
ಸುಳ್ಳಾಡುವವನೇ ನೀಚನು..

ಜಾ ಎಂದರೆ ಹೋಗು...
ತಿ ಎಂದರೆ ಪೂರ್ತಿ ಹೋಗು...
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ