ನ್ಯಾನೋ ಕತೆ
ಸಮಯ
ಹೆಸರು ಮಾತ್ರ ನೆನಪಿದ್ದ ಕ್ಲಾಸ್ ಮೇಟ್ ಒಬ್ಬಳಿಂದ ಅಚಾನಕ್ ಆಗಿ ಕರೆ ಬಂದಾಗ ಖುಷಿಯಲ್ಲಿ ತೇಲಾಡತೊಡಗಿದ್ದ ಕಿರಣ್. ತನ್ನ ಬದುಕಿನಲ್ಲಿ ತನಗಾರೂ ಕಷ್ಟ ಸುಖ ಹಂಚಿಕೊಳ್ಳಲಿಕ್ಕಿಲ್ಲ ಅಂದು ಕೊಂಡಿದ್ದ ಕಿರಣನಿಗೆ ಆಕಾಶದಿಂದ ತಾರೆಯೇ ಉದುರಿ ಬಳಿ ಬಂದಂತೆ ಆಗಿತ್ತು. ತನ್ನ ಮುರಿದ ಜೀವನದ ಬಗ್ಗೆ, ನೋವು ನಲಿವಿನ ಬಗ್ಗೆ ಹಂಚಿಕೊಂಡು ಹಗುರಾದ. ಅವನ ಬಾಲ್ಯದ ಸಹಪಾಠಿ ಹಾಗೂ ಗೆಳತಿ ಪ್ರಿಯಾಳೂ ತನ್ನ ಬದುಕಿನ ಸುಖ ದು:ಖಗಳ ಹಂಚಿಕೊಳ್ಳುತ್ತಾ ಕಳೆದು ಹೋದ ಸಮಯ ಮತ್ತೆ ಸಿಕ್ಕಂತೆ ಜೀವನವನ್ನು ಸಂತಸದಿಂದ ಕಳೆಯತೊಡಗಿದರು..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ