ಸೋಮವಾರ, ನವೆಂಬರ್ 19, 2018

598.ಏಕೆ

ಏಕೆ...

ಬಾರೆ ನನ್ನ ರಾಣಿ...ಮುದ್ದು ನಲ್ಲೆ..
ಬಾರೆ ನನ್ನ ರಾಣಿ...

ಮನಸಿನ ಕೂಗು ಕೇಳದಾಯಿತೇಕೆ?
ಮೌನದ ಕಹಳೆ ಹಿತವಾಗದೇಕೆ ...?
ಮುಖವಿದು ಹೀಗೆ ಮಂಕಾಯಿತೇಕೆ?
ಮಾತಿನ ಮುದಕೆ ಸಂಕೋಚವೇಕೆ?
ಬಾರೇ ನನ್ನ ರಾಣಿ...

ರತಿಯ ವದನ ಕೆಂಪಾಯಿತೇಕೆ..?
ರಮಿಸುವ ಮದನ ಬಳಿ ಬರಬಾರದೇಕೆ..?
ಕನ್ಯೆಯ ತುಟಿಯು ಬಿರಿದಿದೆ ಹೀಗೇಕೆ?
ಕೆನ್ನೆಯು ನಗೆಯ ಬೀರದು ಏಕೆ?
ಬಾರೇ ನನ್ನ ರಾಣಿ ಬಾರೇ..

ರಂಪದ ಮೊಗ್ಗು ಅರಳಿಹುದೇಕೆ..?
ರಂಗಿನ ಮೊಗವು ಕುಂದಿಹುದು ಏಕೆ?
ರಾಗಿಯ ಬಣ್ಣ ಗೋಧಿಗೆ ಹೇಗೆ..?
ರವಿಯ ಕುದಿತ ಚಂದಿರನಿಗೇಕೆ?
ಬಾರೇ ನನ್ನ ರಾಣಿ..

ಕೋಪದ ಕೈಲಿ ಬುದ್ಧಿಯದು ಏಕೆ?
ಕೋರುವೆ ಚೆಲುವೆ ನಗುವೊಮ್ಮೆ ಬರಲಿ..
ನನ್ನ ಮೇಲಿನ ಸಿಟ್ಟು ಕರಗಿ ಹೋಗ್ಲಿ..
ನಾಗಿಣಿಯಂತೆ ಬುಸುಗುಡುತಿಹೆ ಏಕೆ?
ಬಾರೇ ನನ್ನ ರಾಣಿ...

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ