ಬರುವನು ಬಲಿ, ಅವನಿಂದ ಕಲಿ
ಬಂದಿಹುದು ಬೆಳಕ ಹಬ್ಬ ದೀಪಾವಳಿ
ತಂದಿಹುದು ಸಂತಸದ ನಡಾವಳಿ...
ಬರುವನ ಜಗವನು ನೋಡಲು ಬಲಿ
ಬೇಸರಪಡುವನು ನೋಡಿ ಜನರ ಬಲಿ..
ಕೇಳುವುದು ಕಾರಣ ಯಾರ ಬಳಿ?
ಕಲಿಯುಗ ಎಲ್ಲರೂ ಇಲ್ಲಿ ತಾವೇ 'ಕಲಿ'..
ಕೊಲ್ಲುವವ,ಕಡಿವವ ಎಲ್ಲರೂ ಇರುವರು
ಪಾಪದ ಜನರಿಗೆ ಬದುಕಕಲು ಬಿಡರು
ಹಲವು ಸಂತತಿಗೆ ಕಟ್ಟುತ ಇಡುವರು
ಧನದಾಸೆಗೆ ಸಂಬಂಧಗಳ ಮುರಿವರು..
ಬಲಿ ತಾ ಸಹಿಸನು ಪರಿಸರ ನಾಶ
ತನ್ನೆದುರೇ ತನ್ನ ಜಾಗದ ವಿನಾಶ
ಸುರಿಯುತಿಹ ಮಾನವ ಭೂಮಿಗೆ ವಿಷ
ಬಲಿ ಶಪಿಸಿದ 'ಆಗುವಿರಿ ನೀವು ಸರ್ವನಾಶ'.
ಮನುಜಗೆ ಬುದ್ಧಿಯು ಬರದು ಎಂದೂ
ಕಾಲಿಗೆ ಕೊಡಲಿಯ ಹಾಕಿಕೊಂಡಿಹನಿಂದೂ
ಮನೆಮನ ಎಲ್ಲಾ ಆಗಿದೆ ಕಲುಷಿತ
ಬಲಿ ಸರಿಪಡಿಸಲಾರ ಬಂದರೂ ಅನವರತ..
ಮಕ್ಕಳ ಹಿರಿಯರ ಎಲ್ಲರ ಬಲಿ,
ಮಾನ ಪ್ರಾಣ ಧನದಾಹದ ಬಲಿ!
ನೆಲ ಜಲ ಗಾಳಿಯು ಮಲಿನಕೆ ಬಲಿ
ಕೊನೆಯಲಿ ಪ್ರಕೃತಿ ನಾಶಕೆ ನಾವೇ ಬಲಿ!
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ