ಮರೆಯದಿರು
ಶ್ವಾನವು ಕಲಿಸುವ ಪಾಠವು ನಿರಂತರ
ನಿಷ್ಠೆಯ ಮೆರೆದು ಕಾಪಾಡು ಜನರ
ಊಟವ ಕೊಟ್ಟೊಡೆ ಕೃತಜ್ಞತೆ ಇರಲಿ
ಮನೆಯನು ಕಾದು ಅದ ಪಾಲಿಸುತಿರಲಿ..
ಬೇಡುವ ಬದುಕದು ಯಾರಿಗೂ ಬೇಡ
ಕೊಟ್ಟವ ಕೊಡುವನು ಎನುವುದ ನೆನೆಬೇಡ
ಮನದಲಿ ಕಾಯಕ ನಿರತವು ನಲಿಯಲಿ
ಇತರಗೆ ಕೊಡುವುದ ಮರೆಯದೆ ಇರಲಿ..
ದಾನದ ಗುಣವದು ದೇವರ ಹಾಗೆ
ಮನಸಲು ಕನಸಲು ಇರಲಿ ನಗೆ
ವದನದಿ ಅದ ತೋರಲಿ ಕಿರುನಗೆ
ಮಾತಾಡಲಿ ಒಳ್ಳೆಯ ಪದವನು ನಾಲಗೆ..
ನಯನವು ಸಾವಿರ ಕತೆಯನು ಹೇಳಲಿ
ರಂಗಿನ ಜೀವನ ಕರ್ತವ್ಯವ ಮಾಡಲಿ
ಸಂಗದ ಜೊತೆಗೆ ಭೃಂಗವೂ ಸೇರಲಿ
ಏನೇ ಆದರೂ ನಿಷ್ಠೆಯು ಇರಲಿ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ