ಶುಕ್ರವಾರ, ನವೆಂಬರ್ 16, 2018

593. ಪರರಿಗಾಗಿ

ಪರರಿಗಾಗು

ತನ್ನದೆ ಎನ್ನಲು ಸಮಯವು ಹಲವಿದೆ
ಭಿನ್ನತೆ ಇರಲದು ನಮ್ಮಯ ಬಾಳಲಿ
ತನಗೇ ದುಡಿವುದು ಯಾವಾಗಲು ಇದೆ
ದುಡಿದುದ ಇತರಗೆ ಕೊಡುವುದೆ ಸಹಾಯ..

ಬಾಳಲಿ ಕೊಡುವೆನು ಎನುವಗೆ ಇರದು
ಇರುವವನಿಗೆ ಆತ್ಮದಲಿ ನೆಮ್ಮದಿ ಸಿಗದು
ಬಯಸಿದ ಬದುಕು ಮನುಜಗೆ ಬರದು
ಇರುವುದ ಹೊರತು ಇರದುದ ಕೆದಕು..

ಹಾಸಿಗೆ ಇದ್ದರು ಕಾಲದು ಚಾಚದು
ಬಟ್ಟೆಯು ಹರಿದರೂ ಬಣ್ಣವು ಮಾಸದು
ಸಹಕರಿಸುವೆ ಎನುವ ಭಾವವೆ ಹೊಸದು
ಬಡವನೂ ಸಿರಿಕಗೆ ನೀಡುವ ಸೊತ್ತದು..

ಮುತ್ತಿನ ತುತ್ತನು ಬೇಡುವ ಮನುಜ
ನಕ್ಕರು ಅತ್ತರು ಬದುಕದು ಸಹಜ
ಮನವದು ಇತರಗೆ ಮಾಡಲು ಹೊರಡೆ
ಕೃತಜ್ಞತೆ ಸಿಗುವುದು ಸಹಾಯದ ಉಸಿರಿಗೆ..

ದೇವನ ವರವದು ಹಿರಿಯರ ಹಾರೈಕೆ
ವದನದಿ ನಗುವು ಮನದಲಿ ಪ್ರೀತಿ
ವಂಶದ ಕುಡಿಗಳು ಕಲಿಯಲು ಬೇಕು
ಮನೆ ಗ್ರಾಮ ದೇಶ ಬೆಳೆಯಲು ಸಾಕು..
@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ