ಬುಧವಾರ, ನವೆಂಬರ್ 14, 2018

592. ಕಂದನ ಕರೆ

ಕಂದನ ಕರೆ

ಕೇಳಿ ಹಿರಿಯರೆ
ನಮ್ಮ ಬದುಕಿಗೆ
ಮುನ್ನುಡಿ ಬರೆಯಬೇಕಿದೆ
ಅದಕೆ ಕೇಳುತಿಹೆ
ನಿಮ್ಮ ಕಿವಿಗಳ
ತೆರೆದು ಆಲಿಸಿ ಒಮ್ಮೆಗೆ..

ಕಾಡು ಇಹುದು
ಜೀವ ಕುಲಕೆ
ನೀವೆ ಅದನು
ಬಹಳ ಬಳಸಿ
ನಾಶ ಮಾಡೆ
ನಮ್ಮ ಬಾಳಿಗೆ
ಕೊಳ್ಳಿ ಇಟ್ಟು
ನಮಗೆ ಬಾಳಿಲ್ಲವೇ?

ನೀರನೆಲ್ಲ ಕೊಳಕುಮಾಡಿ
ವಿಷವ ಸುರಿದು
ರೋಗ ಕಾಡಿ
ನಮಗೆ ಬದುಕಿಲ್ಲವೇ?
ನೀರು ಸಿಗದೆ
ಒದ್ದಾಡಿ ಸಾಯಬೇಕೇ..

ಮಣ್ಣಿಗೆಲ್ಲ ವಿಷವ ತುಂಬಿ
ಬೆಳೆಯ ತೆಗೆಯುತ
ರಾಸಾಯನಿಕ ತಿಂದು
ರುಚಿಗಾಗಿ ಪೌಡರ್
ನಮಗೂ ತಿನ್ನಿಸಿ
ಆರೋಗ್ಯ ಕೆಡಿಸೋ
ದೊಡ್ಡವರಿಗೇನಾಗಿದೆ?

ಹೊಗೆಯ ಉಗುಳುತ
ಗಾಳಿ ಕೆಡಿಸಿ
ಭೂಮಿ ತಾಪವ
ಹೆಚ್ಚು ಮಾಡಿ
ಉಸಿರನಾಡದೆ ಹೇಗಿರಲಿ
ಮಹಾನುಭಾವರೆ ನೀವು
ನಮಗೂ ಉಳಿಸಿ
ಶುದ್ಧ ಗಾಳಿಯ
ಉಸಿರಾಡ ಬೇಡವೆ?
ನಮ್ಮ ಮೇಲೆ
ಕರುಣೆ ಬಾರದೆ?

ಹಣ್ಣು ಹೂವಿಗೂ
ಸೂಜಿ ಚುಚ್ಚುತ,
ಮಣ್ಣು ನೀರಿಗೂ
ರಾಸಾಯನಿಕ ಬೆರೆಸುತ
ಸತ್ತು ಬದುಕುತ
ನಮ್ಮ ಜೀವನ
ಉರಿಯ ಕವನ
ಕರುಣಾಜನಕ!

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ