ಗುರುವಾರ, ನವೆಂಬರ್ 22, 2018

605. ನಡೆಯಲಿ ಹೀಗೇ

ನಡೆಯಲಿ ಹೀಗೆ...

ತಂಪು ಮನದ ಕೆಂಪು ರಕುತ
ಕುದಿಯದಿರಲಿ ಮನಗಳೆ
ಕಂಪು ಬೀರೊ ಸೊಂಪು ಹರಡೋ
ಬದುಕು ಸವೆಸಿ ನರಗಳೆ..

ನಾಳೆ ಹೇಗೆ ಏನೊ ಎಂತೋ
ಅರಿಯಲುಂಟು ದಿನಗಳು..
ಇಂದು ಈಗ ನಮ್ಮದಾಗಿ
ಸಲಹಲುಂಟು ಕ್ಷಣಗಳು...

ನವ್ಯ ರಾಗ ನಮ್ಮ ಬಾಳು
ಕಾವ್ಯ -ಗೀತೆ ಹಾಡಲು,
ಸವ್ಯಸಾಚಿ ವದನದೊಳು
ಮಂದಹಾಸ ಮೂಡಲು..

ನಲಿವು ನೋವು ಸವಿಯಲುಂಟು
ಬಾಳ ನೌಕೆ ಸಾಗಲು..
ಕಷ್ಟ ಸುಖವ ಪಡೆಯಲುಂಟು
ಅನುಭವವು ಹೆಚ್ಚಲು..

ಕೆಂಪು ಸೂರ್ಯ ಬರುತಲಿರಲು
ತಂಪು ಚಂದ್ರ ಮರೆಯಲಿ
ರಾತ್ರಿಯಂಧಕಾರ ಬರಲು
ದೀಪ ಬೇಕು ಬಳಿಯಲಿ..

@ಪ್ರೇಮ್@

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ