ಅಂಬರಕ್ಕೇರಿದ ಅಂಬರೀಶ
ಸಿನಿಜಗತ್ತಿನ ಮಹಾ ಸಾಹುಕಾರ
ರಾಜಕೀಯದಲೂ ನಮಸ್ಕಾರ
ಬೇಡಿ ಬಂದವಗೆ ಸದಾ ಸಹಕಾರ
ಅಂಬರಕ್ಕೇರಿದ ಅಂಬರೀಶ ವೀರ..
ಮಾತೆಂದರೆ ಕಡ್ಡಿ ಮುರಿದಂತೆ
ನ್ಯಾಯಕೆಂದೂ ತಾನು ಮುಂದೆ
ಅಭಿಷೇಕನ ಭೂಮಿಗೆ 'ತಂದೆ'
ಕನ್ನಡಕಾಗೆ ಹೋರಾಡಿ ನಿಂದೆ..
ಮಂಡ್ಯದ ಗಂಡೆಂಬ ಖ್ಯಾತಿ ನಿನಗೆ
ಕಣ್ವರ್ ಲಾಲನೆ ಸ್ಪೂರ್ತಿ ನಮಗೆ
ಹುಟ್ಟಿ ಬಂದು, ಬದುಕಿದೆ ಕನ್ನಡದೆಡೆಗೆ
ಬಿಟ್ಟು ಹೋದೆ ಹಲ ಸಿನಿಮಾಗಳ ನಾಡ ಜನತೆಗೆ.
ನಾವೆಲ್ಲ ಒಂದೆಂಬ ಸಂದೇಶ ಸಾರಿದೆ
ಕಲಾಕಾರರ ವಂಶಧ ಕೀರ್ತಿಯ ಉಳಿಸಿದೆ
ಸಾಧನೆಯ ಮೆಟ್ಟಿಲನು ಏರುತ ಬಂದೆ
ಕಲೆ, ಸಹಾಯಕೆ ಮುಡಿಪಿಟ್ಟ ಜೀವನ ನಿನ್ನದಾಗಿದೆ.
ಮರೆತರೂ ಮರೆಯಲಾರರು ಜನ ನಿನ್ನ
ಅಗಲಿರುವೆ ಹಲವಾರು ಕಲಾ ರತ್ನಗಳನ್ನ
ಕೊಟ್ಟಿರುವೆ ಕೆಲವಾರು ಪಾತ್ರಗಳನ್ನ
ನೆನಪಿಡುವರು ಕನ್ನಡಿಗರು ಸದಾ ನಿನ್ನ...
@ಪ್ರೇಮ್@
25.11.18
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ