ಗಝಲ್...
ಅಂಧಕಾರದೊಳಗೆ ಕುಳಿತು ಅರಚಬೇಡಿ ಸುಮ್ಮನೆ..
ತನ್ನತನದ ಬೇಡಿಬಿಚ್ಚಿ ಕಿರುಚಬೇಡಿ ಸುಮ್ಮನೆ...
ಮನದ ಮೂಲೆಯಲ್ಲಿ ಇಹುದು ನೋವು
ಕಷ್ಟ ತಿಳಿದು ಕುಹಕವಾಡಿ ಗುಡುಗಬೇಡಿ ಸುಮ್ಮನೆ..
ಬಾಳ ಬಂಡಿ ಕ್ಷಣ ಕ್ಷಣಕೂ ನೂಕಲಿಹುದು,
ಮನದಿ ಕಾದು ಕುದಿದು ಕರಗಬೇಡಿ ಸುಮ್ಮನೆ..
ಲಾಲಿ ಹಾಡು ಬಾಲ್ಯದಲ್ಲಿ ಮಾತ್ರವೆಂದು ತಿಳಿದಿರಲಿ
ಜಾಲಿ ಮರದ ಹಾಗೆ ನೀವು ಬದುಕಬೇಡಿ ಸುಮ್ಮನೆ..
ತಂಪನೀವ ಚಂದಿರನ ಕರೆಯದಿರಿ ಮನೆಯೊಳಗೆ
ಕೆಂಪು ಕಿರಣ ನೀಡೊ ಸೂರ್ಯನ ತಡೆಯಬೇಡಿ ಸುಮ್ಮನೆ..
ವಂದನೆಯು ಮಾತೆಗದುವೆ ಬದುಕ ಕಲಿಸಿದವಳಿಗೆ
ಬುದ್ಧಿ ಕಲಿಸಿದ ಗುರುಗಳನ್ನು ಮರೆಯಬೇಡಿ ಸುಮ್ಮನೆ..
ನಾಟ್ಯದಂತೆ ಪ್ರೇಮದಿ ಪಾಠ ಕಲಿಸಿ ಮೆರೆದ ಜಗದ ಗುರುಗಳಿಹರು
ಪಠ್ಯ ಕಲಿತ ಬಳಿಕ ಮನದಿ ಶಪಿಸಬೇಡಿ ಸುಮ್ಮನೆ..
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ