ಬೆಳಕಿರಲಿ..
ಬಂಗಾರ ಧನ ಧಾನ್ಯ
ನಿನ್ನದೆಂಬರು ಲಕುಮಿ
ಆದರೇಕೋ ಜನರು
ತುಂಬಿಸುತ ಕುಳಿತಿಹರು...
ತನ್ನ ಮನೆಯೊಳಗೆ
ಸಿರಿತನವು ಇರಬೇಕು..
ಮನದೊಳಗೂ ಬೇಕು..
ಅದಿಲ್ಲಿ ಕಾಣುತಿಲ್ಲ..
ಲಕ್ಷ್ಮಿಯನುಗ್ರಹ ಬೇಕು
ಲಕ್ಷ್ಮಿಯ ಧನ ಬೇಕು
ಲಕ್ಷ್ಮಿ ಬೇಡವೆನಗೆ
ಲಕ್ಷ್ಮಿಯ ಆಸ್ತಿ ಸಾಕು!
ಮನೆ ಬೆಳಗೆ
ಮನ ಬೆಳಗೆ
ಲಕ್ಷ್ಮಿಯೊಂದಿಗೆ ಅವಳ
ಗುಣವೂ ಬೇಕು..
ಮನದಲೊಂದು
ಮನೆಯಲೊಂದು
ಇದ್ದರೇನುಪಯೋಗ..
ಗುಣವಿಲ್ಲದ ಮೇಲೆ?
ಯಾವ ಹಬ್ಬವೆ ಬರಲಿ
ಮನೆಯಲ್ಲಿ ಬೆಳಕಿರಲಿ..
ಅಂತೆಯೇ ಅದಿರಲಿ
ಮನದಲ್ಲೂ ಕೂಡಾ...
@ಪ್ರೇಮ್@
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ